ಶುಕ್ರವಾರ, ಸೆಪ್ಟೆಂಬರ್ 17, 2021
22 °C

ಶಿರಸಿ: ಪ್ರಶಾಂತ ದೇಶಪಾಂಡೆ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ವರದಾ ನದಿ ಉಕ್ಕಿದ ಪರಿಣಾಮ ನೆರೆ ಬಾಧಿತವಾದ ತಾಲ್ಲೂಕಿನ ಮೊಗವಳ್ಳಿ ಗ್ರಾಮಕ್ಕೆ ಕಾಂಗ್ರೆಸ್ ಮುಖಂಡ ಪ್ರಶಾಂತ ದೇಶಪಾಂಡೆ ಭೇಟಿ ನೀಡಿದರು.

ಅತಿವೃಷ್ಟಿಯಿಂದ ಹಾನಿಗೊಳಗಾದ ಕಲ್ಲಿ, ಸಹಸ್ರಳ್ಳಿ, ಮುಂಡೆಗಳ್ಳಿ, ಅಜ್ಜರಣಿ, ಅಂಡಗಿ, ಹೊಸಕೋಪ್ಪ, ಬೆಳ್ಳನಕೇರಿ ಭಾಗದಲ್ಲಿ ವೀಕ್ಷಣೆ ಮಾಡಿದರು. ಕೃಷಿಭೂಮಿಗೆ ಹಾನಿಯುಂಟು ಮಾಡಿದ್ದ ರಂಗಾಪುರ ಕೆರೆ ವೀಕ್ಷಿಸಿದರು. ಬಳಿಕ ವರದಾ ನದಿಗೆ ಬಾಗಿನ ಅರ್ಪಿಸಿದರು. ನೆರೆ ಸಂತ್ರಸ್ತರಿಗೆ ಸಾಂತ್ವನ ಹೇಳಿದ ಅವರು ಸರ್ಕಾರದಿಂದ ಹೆಚ್ಚಿನ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಹೋರಾಟ ನಡೆಸುವ ಭರವಸೆ ನೀಡಿದರು.

ಕಾಂಗ್ರೆಸ್ ಮುಖಂಡರಾದ ಸಿ.ಎಫ್. ನಾಯ್ಕ, ಶ್ರೀಲತಾ ಕಾಳೇರಮನೆ, ಬಸವರಾಜ ದೊಡ್ಮನಿ, ಜ್ಯೋತಿ ಪಾಟೀಲ, ಸುಧಾಕರ ನಾಯ್ಕ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.