ಬ್ಯಾಡ್ಮಿಂಟನ್‌ನಲ್ಲಿ ಸಹೋದರಿಯರ ಸವಾಲ್!

7
ಕ್ರೀಡೆಯಲ್ಲಿ ಮಿಂಚುತ್ತಿರುವ ಶಿರಸಿಯ ಪ್ರಾರ್ಥನಾ, ಪ್ರೇರಣಾ: ಪೋಷಕರ ಬೆಂಬಲ

ಬ್ಯಾಡ್ಮಿಂಟನ್‌ನಲ್ಲಿ ಸಹೋದರಿಯರ ಸವಾಲ್!

Published:
Updated:
Deccan Herald

ಕಾರವಾರ:  ದಟ್ಟಾರಣ್ಯ, ತೋಟಗಾರಿಕೆ ಬೆಳೆಗಳು, ಸಾಂಸ್ಕೃತಿಕ ವಾತಾವರಣದಿಂದ ಪ್ರಸಿದ್ಧವಾಗಿರುವ ಶಿರಸಿಯಲ್ಲಿ ಸಹೋದರಿಯರಿಬ್ಬರು ಬ್ಯಾಡ್ಮಿಂಟನ್‌ನಲ್ಲಿ ಮಿಂಚುತ್ತಿದ್ದಾರೆ. ಸಣ್ಣ ವಯಸ್ಸಿನಲ್ಲೇ ರಾಷ್ಟ್ರಮಟ್ಟದ ಟೂರ್ನಿಗಳಲ್ಲಿ ಪ್ರಶಸ್ತಿ ಗಿಟ್ಟಿಸಿಕೊಳ್ಳುತ್ತಿದ್ದಾರೆ.

ಲಯನ್ಸ್ ಶಾಲೆಯ ಎಸ್ಎಸ್‌ಎಲ್‌ಸಿ ವಿದ್ಯಾರ್ಥಿನಿ ಪ್ರಾರ್ಥನಾ ಶೇಟ್ ಮತ್ತು ಅವಳ ತಂಗಿ, ಅದೇ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ಪ್ರೇರಣಾ ಶೇಟ್ ಈ ಕ್ರೀಡೆಯಲ್ಲಿ ಭರವಸೆ ಮೂಡಿಸಿದ್ದಾರೆ.

ಪ್ರತಿಷ್ಠಿತ ತರಬೇತಿ ಶಿಬಿರಗಳಲ್ಲಿ ಒಂದಾಗಿರುವ ಬೆಂಗಳೂರಿನ ‘ಸೌತ್ ಏಷ್ಯನ್ ಕೋಚಿಂಗ್ ಕ್ಯಾಂಪ್’ಗೆ ರಾಜ್ಯದಿಂದ ಆಯ್ಕೆಯಾದ ಇಬ್ಬರು ಆಟಗಾರರ ಪೈಕಿ ಈಕೆಯೂ ಒಬ್ಬಳು. ಅಲ್ಲಿ ಹಿರಿಯ ಬ್ಯಾಡ್ಮಿಂಟನ್ ಆಟಗಾರ ವಿಮಲ್‌ ಕುಮಾರ್ (ಸೈನಾ ನೆಹ್ವಾಲ್ ಅವರಿಗೂ ತರಬೇತುದಾರ) ಅವರ ಮಾರ್ಗದರ್ಶನದಲ್ಲಿ 20 ದಿನ ತರಬೇತಿ ಪಡೆದಿದ್ದಾಳೆ. ಶಿಬಿರಾರ್ಥಿಗಳ ನಡುವೆಯೇ ಆಯೋಜಿಸಲಾದ ಟೂರ್ನಿಯಲ್ಲಿ ಉತ್ತರಾಖಂಡದ ಪ್ರತಿಸ್ಪರ್ಧಿಯನ್ನು ಸೋಲಿಸಿದ ಪ್ರೇರಣಾ ಚಾಂಪಿಯನ್ ಆಗಿದ್ದಳು.

ಪ್ರೇರಣಾ ಸಿಂಗಲ್ಸ್‌ ಮಾತ್ರವಲ್ಲದೇ ಡಬಲ್ಸ್‌ ವಿಭಾಗದಲ್ಲೂ ಉತ್ತಮ ಸಾಧನೆ ಮಾಡುತ್ತಿದ್ದಾಳೆ. ಇದರಲ್ಲಿ ಶಿವಮೊಗ್ಗದ ಬಿ.ಆರಾಧನಾ ಜೊತೆಗಾತಿಯಾಗಿದ್ದಾಳೆ.

‘ತಂಗಿಯ ಈ ಸಾಧನೆಗೆ ಅಕ್ಕ ಪ್ರಾರ್ಥನಾಳೇ ಪ್ರೇರಣೆ’ ಎನ್ನುತ್ತಾರೆ ಅವರ ತಂದೆ ನಂದಕುಮಾರ್.

‘ಪ್ರಾರ್ಥನಾಳ ದೈಹಿಕ ಕ್ಷಮತೆ ಹೆಚ್ಚಿಸುವ ಸಲುವಾಗಿ ಶಿರಸಿಯ ಬ್ಲೂ ಸ್ಟಾರ್ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ತರಬೇತಿಗೆ ಸೇರಿಸಿದೆವು. ಅಲ್ಲಿ ನಮ್ಮ ಮಕ್ಕಳಿಗೆ ಮೂರೂವರೆ ವರ್ಷಗಳಿಂದ ಸಿದ್ದಾಪುರದ ರವೀಂದ್ರ ಶಾನಭಾಗ ಅವರು ತರಬೇತಿ ನೀಡುತ್ತಿದ್ದಾರೆ. ಅಕ್ಕನ ಜತೆ ಹೋಗುತ್ತಿದ್ದ ಪ್ರೇರಣಾ ಕೂಡ ಆಸಕ್ತಿಯಿಂದ ಭಾಗವಹಿಸಿದಳು’ ಎಂದು ವಿವರಿಸುತ್ತಾರೆ.

‘ಆರಂಭದಿಂದಲೂ ಉತ್ತಮವಾಗಿ ಆಡುತ್ತಿರುವ ಪ್ರಾರ್ಥನಾ, ಎಂಟನೇ ತರಗತಿಯಲ್ಲಿದ್ದಾಗ ಉಡುಪಿಯಲ್ಲಿ ನಡೆದ ಖೇಲೋ ಇಂಡಿಯಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಳು. ಅದೇವರ್ಷ ನಾಸಿಕ್‌ನಲ್ಲಿ ಸ್ಕೂಲ್‌ ಗೇಮ್ಸ್ ಫೆಡರೇಷನ್‌ ಹಮ್ಮಿಕೊಂಡ ಟೂರ್ನಿಗೆ ರಾಜ್ಯದ ಐವರ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಳು. ಹತ್ತು ಹಲವು ಟೂರ್ನಿಗಳಲ್ಲಿ ಬಹುಮಾನ ಗೆದ್ದುಕೊಂಡಿದ್ದಾಳೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ.

‘ಈ ವರ್ಷ ಎಸ್‌ಎಸ್‌ಎಲ್‌ಸಿ ಅಧ್ಯಯನ ಮಾಡುತ್ತಿದ್ದಾಳೆ. ಹೀಗಾಗಿ ಓದಿನ ಕಡೆಗೆ ಹೆಚ್ಚು ಗಮನ ಕೊಟ್ಟಿರುವ ಕಾರಣ ಸಿಂಗಲ್ಸ್ ಟೂರ್ನಿಗಳಲ್ಲಿ ಅಷ್ಟಾಗಿ ಭಾಗವಹಿಸುತ್ತಿಲ್ಲ. ಆದರೆ, ಮುಂದೆ ಈ ಕ್ರೀಡೆಯಲ್ಲಿ ಮುಂದುವರಿಸುತ್ತೇವೆ’ ಎಂಬ ಭರವಸೆಯನ್ನೂ ಅವರು ನೀಡುತ್ತಾರೆ.

ಅಕ್ಕ – ತಂಗಿಯರ ಸಾಧನೆ

ಪ್ರಾರ್ಥನಾ:

* ‘ಖೇಲೊ ಇಂಡಿಯಾ’ದಲ್ಲಿ ಭಾಗಿ

* ರಾಷ್ಟ್ರೀಯ ಟೂರ್ನಿಗೆ ರಾಜ್ಯ ತಂಡದಲ್ಲಿ ಸ್ಥಾನ

* ವಿವಿಧ ಟೂರ್ನಿಗಳಲ್ಲಿ ಪ್ರಶಸ್ತಿ

ಪ್ರೇರಣಾ:

* 13 ವರ್ಷದ ಒಳಗಿನ ಬಾಲಕಿಯರ ಸಿಂಗಲ್ಸ್ ಮತ್ತು ಡಬಲ್ಸ್‌ನಲ್ಲಿ ರಾಜ್ಯಕ್ಕೆ ಪ್ರಥಮ ಶ್ರೇಯಾಂಕ

* ಈ ವರ್ಷ ಮೂರು ಟೂರ್ನಿಗಳಲ್ಲಿ ಚಾಂಪಿಯನ್

* ಎರಡು ಟೂರ್ನಿಗಳಲ್ಲಿ ರನ್ನರ್ ಅಪ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !