ಭಾನುವಾರ, ಅಕ್ಟೋಬರ್ 20, 2019
27 °C

ಸಮುದ್ರದಲ್ಲಿ ಮುಳುಗುತ್ತಿದ್ದ ಪ್ರವಾಸಿಗರ ರಕ್ಷಣೆ

Published:
Updated:

ಭಟ್ಕಳ: ಮುರ್ಡೇಶ್ವರದಲ್ಲಿ ಬುಧವಾರ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರನ್ನು ಜೀವರಕ್ಷಕ ದಳದ ಸಿಬ್ಬಂದಿ ರಕ್ಷಿಸಿ ದಡಕ್ಕೆ ಸೇರಿಸಿದ್ದಾರೆ.

ಪ್ರಾಣಾಪಾಯದಿಂದ ಪಾರಾದವರನ್ನು ಬೆಂಗಳೂರು ಬಸವನಗುಡಿ ನಿವಾಸಿ, ಬಂಗಾರದ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಮನೋಹರ ಎಂ.ಬಿ. (26) ಹಾಗೂ ಅವರ ಸ್ನೇಹಿತ, ಬೆಂಗಳೂರು ದೀಪಾಂಜಲಿ ನಗರದ ಜಗದೀಶ ಕೆ.ಟಿ. (27) ಎಂದು ಗುರುತಿಸ
ಲಾಗಿದೆ. ಇವರನ್ನು ಪೊಲೀಸ್ ವಶಕ್ಕೆ ನೀಡಿ, ಎಚ್ಚರಿಕೆ ನೀಡಿ ಬಿಡುಗಡೆ ಮಾಡಲಾಗಿದೆ.

ಬೀಚ್ ಸೂಪರ‌ ವೈಸರ್ ನರಸಿಂಹ ಮೊಗೇರ ಮುಂದಾಳತ್ವದ ಜೀವ ರಕ್ಷಕ ತಂಡದ ಸದಸ್ಯರಾದ ಶಶಿಧರ ನಾಯ್ಕ ಮತ್ತು ಚಂದ್ರಶೇಖರ ದೇವಾಡಿಗ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಮೂರು ದಿನಗಳ ಅವಧಿಯಲ್ಲಿ ಮುರ್ಡೇಶ್ವರದಲ್ಲಿ ಒಟ್ಟು 10 ಪ್ರವಾಸಿಗರ ಜೀವ ಉಳಿಸಿ ದಡಕ್ಕೆ ಸೇರಿಸಲಾಗಿದೆ.

Post Comments (+)