ಕಾರವಾರದಲ್ಲಿ ಬಸ್ ಸಂಚಾರಕ್ಕೆ ಅಡ್ಡಿ: ಪ್ರತಿಭಟನಾಕಾರರು ಪೊಲೀಸ್ ವಶಕ್ಕೆ 

7

ಕಾರವಾರದಲ್ಲಿ ಬಸ್ ಸಂಚಾರಕ್ಕೆ ಅಡ್ಡಿ: ಪ್ರತಿಭಟನಾಕಾರರು ಪೊಲೀಸ್ ವಶಕ್ಕೆ 

Published:
Updated:

ಕಾರವಾರ: ರಾಷ್ಟ್ರವ್ಯಾಪಿ ಮುಷ್ಕರದ ಎರಡನೇ ದಿನವಾದ ಬುಧವಾರ ನಗರದಲ್ಲಿ ಬಸ್ ಸಂಚಾರ ಆರಂಭವಾಗಿದೆ. 

ಬಸ್ ನಿಲ್ದಾಣದ ಎದುರು ಸೇರಿದ ಸಿಐಟಿಯು ಕಾರ್ಯಕರ್ತರು ಬಸ್ ಗಳಿಗೆ ಅಡ್ಡ ನಿಂತರು. ಆಗ ಪೊಲೀಸರು ಮಧ್ಯಪ್ರವೇಶಿಸಿ ಬಸ್ ಸಂಚಾರ ತಡೆಯದಂತೆ ಮನವಿ ಮಾಡಿದರು. ಆದರೂ ಪ್ರತಿಭಟನಾಕಾರರು ಕೇಳಲಿಲ್ಲ. ಕೊನೆಗೆ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಪೊಲೀಸ್ ಬಸ್ ಗೆ ಹತ್ತಿಸಿ ಬೇರೆಡೆಗೆ ಕರೆದುಕೊಂಡು ಹೋದರು. ಪೊಲೀಸರ ಕ್ರಮಕ್ಕೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಳಿದಂತೆ, ಕಾರವಾರದಲ್ಲಿ ಅಂಗಡಿ ಮುಂಗಟ್ಟುಗಳ ಬಾಗಿಲು ತೆರೆಯಲಾಗುತ್ತಿದೆ. ಮಂಗಳವಾರವೂ ವಹಿವಾಟು ಸ್ಥಗಿತಗೊಂಡಿರಲಿಲ್ಲ. ಇಂದು ಶಾಲಾ ಕಾಲೇಜುಗಳೂ ತೆರೆದಿರಲಿವೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !