ಶನಿವಾರ, ಡಿಸೆಂಬರ್ 7, 2019
22 °C
ಬಿಗಿಯಾದ ಹಿಡಿತಕ್ಕೆ ಸಿಲುಕಿ ಉಸಿರು ಕಳೆದುಕೊಂಡ ಎಮ್ಮೆ ಕರು

ಕಾರವಾರ | ಎಮ್ಮೆ ಕರುವನ್ನು ನುಂಗಲು ಯತ್ನಿಸಿದ ಹೆಬ್ಬಾವು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ನಗರದ ಸೋನಾರವಾಡದ ಗದ್ದೆಯಲ್ಲಿ ಸೋಮವಾರ ಬೆಳಿಗ್ಗೆ ಮೇಯುತ್ತಿದ್ದ ಎಮ್ಮೆ ಕರುವನ್ನು ಎಂಟೂವರೆ ಅಡಿ ಉದ್ದದ ಹೆಬ್ಬಾವು ನುಂಗಲು ಪ್ರಯತ್ನಿಸಿತು. ಹಾವಿನ ಬಾಯಿಯಿಂದ ಬಿಡಿಸಿಕೊಳ್ಳಲು ಕರು ಒದ್ದಾಡಿ, ಮೃತಪಟ್ಟಿತು.

ಹೆಬ್ಬಾವಿನ ಬಿಗಿಯಾದ ಹಿಡಿತದಿಂದ ತಪ್ಪಿಸಿಕೊಳ್ಳಲು ಕರು ಬಹಳ ಪ್ರಯತ‌್ನ ಪಟ್ಟಿತು. ಅದರ ತಾಯಿ ಕೂಡ ಗಾಬರಿಯಿಂದ  ಓಡಾಡುತ್ತಿತ್ತು. ಸುತ್ತಮುತ್ತ ಹೋಗುತ್ತಿದ್ದವರಿಗೆ ತನ್ನ ಕರುವಿಗೆ ಎದುರಾದ ಸ್ಥಿತಿಯನ್ನು ತನ್ನದೇ ರೀತಿಯಲ್ಲಿ ಹೇಳಲು ಪ್ರಯತ್ನಿಸಿತು. ಸ್ಥಳೀಯರು ಸಮೀಪಕ್ಕೆ ಬಂದು ನೋಡುವಷ್ಟರಲ್ಲಿ ಕರುವಿನ ಉಸಿರು ನಿಂತಿತ್ತು. ಅಷ್ಟರಲ್ಲಿ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹೆಬ್ಬಾವಿನ ಬಾಯಿಯಿಂದ ಕರುವಿನ ಕಳೇಬರವನ್ನು ಬೇರ್ಪಡಿಸಿ, ಹಾವನ್ನು ಕಾಡಿಗೆ ಬಿಟ್ಟರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು