ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರಿವಾಳ, ಕಾಡುಹಂದಿ ಉಪಟಳ: ಬೆಳೆ ಹಾನಿ

ಕಾರವಾರ ತಾಲ್ಲೂಕಿನ ಕಿನ್ನರ ಭಾಗದ ಕೃಷಿಕರಿಂದ ಬೆಳೆ ಪರಿಹಾರಕ್ಕೆ ಒತ್ತಾಯ
Last Updated 14 ಅಕ್ಟೋಬರ್ 2019, 16:40 IST
ಅಕ್ಷರ ಗಾತ್ರ

ಕಾರವಾರ: ನೆರೆಯಿಂದ ಕಂಗೆಟ್ಟಿದ್ದ ತಾಲ್ಲೂಕಿನ ಕಿನ್ನರ ಭಾಗದ ರೈತರಿಗೆ ಈಗ ತಮ್ಮ ಬೆಳೆ ರಕ್ಷಣೆ ಮಾಡಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಪಾರಿವಾಳ ಮತ್ತು ಹಂದಿಗಳ ಕಾಟಕ್ಕೆ ಭತ್ತದ ಫಸಲು ಭಾರಿ ಪ್ರಮಾಣದಲ್ಲಿ ಹಾನಿಯಾಗುತ್ತಿದೆ.

ಸೂರ್ಯ ನೆತ್ತಿ ಮೇಲೆ ಬರುತ್ತಿದ್ದಂತೆ ಪಾರಿವಾಳಗಳು ತೆನೆ ತಿನ್ನಲು ಬರುತ್ತವೆ.ರಾತ್ರಿಯಾದರೆ ಹಂದಿಗಳ ಉಪಟಳ. ಇವುಗಳಿಂದ ತಮ್ಮ ಬೆಳೆಯನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂದು ಚಿಂತಿತರಾಗಿದ್ದಾರೆ. ಈ ಭಾಗದ ಹಲವೆಡೆ ಸಾಕಷ್ಟು ಪ್ರಮಾಣದಲ್ಲಿ ಬೆಳೆ ಹಾನಿಯಾಗಿರುವುದು ಕಂಡುಬಂದಿದೆ.

ನೆರೆಹಾವಳಿಈ ಬಾರಿ ಕೃಷಿಕರಿಗೆ ಬರೆ ಎಳೆದಿದೆ.ಕೆಲವು ಕಡೆ ಪೈರು ಬಂದಿಲ್ಲ. ಬರೀ ಹುಲ್ಲನ್ನೇ ಕೊಯ್ಯುವಂಥಪರಿಸ್ಥಿತಿ ಇದೆ. ಒಂದಷ್ಟು ಭಾಗದಲ್ಲಿ ಅತಿಯಾದ ನೀರಿನಿಂದ ಬೆಳೆ ಕೊಳೆತು ಹೋಗಿದೆ.

‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಫಸಲು ಬಹಳ ಕಡಿಮೆ. ಮಿಕ್ಕುಳಿದ ಅಲ್ಪ ಪ್ರಮಾಣದ ಭತ್ತವನ್ನು ಉಳಿಸಿಕೊಳ್ಳುವುದೇ ಕಷ್ಟವಾಗುತ್ತಿದೆ. ಕೃಷಿಯನ್ನು ನಂಬಿಕೊಂಡು ಬದುಕುತ್ತಿರುವ ನಮಗೆಬೆಳೆಹಾನಿಯ ಏಟು ಸಿಗುತ್ತಿದೆ’ ಎಂದು ರೈತ ಚಂದ್ರಕಾಂತ ನಾಗೇಕರ್ ಅಳಲು ತೋಡಿಕೊಂಡರು.

‘ಗುಂಪುಗುಂಪಾಗಿನುಗ್ಗುವಕಾಡುಹಂದಿಗಳ ನಿಯಂತ್ರಣ ನಮ್ಮಿಂದ ಸಾಧ್ಯವಿಲ್ಲ. ಅರಣ್ಯ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳಬೇಕು. ಪಾರಿವಾಳದ ಹಾವಳಿಗೂನಮ್ಮಲ್ಲಿ ಪರಿಹಾರೋಪಾಯವಿಲ್ಲ. ಬೆವರು ಹರಿಸಿ ದುಡಿದ ಬೆಳೆಗೆ ಹಾನಿಯಾದರೆ ತುಂಬಾ ನೋವಾಗುತ್ತದೆ.ಪ್ರವಾಹದಿಂದ ಈಗಾಗಲೇ ಸಾಕಷ್ಟು ನಷ್ಟ ಕಂಡಿದ್ದೇವೆ. ಜೀವನೋಪಾಯಕ್ಕಿರುವ ಚೂರು ಪಾರು ಬೆಳೆಯೂ ನಾಶವಾದರೆ ಸಮಸ್ಯೆಮತ್ತಷ್ಟು ಬಿಗಡಾಯಿಸುತ್ತದೆ’ ಎಂದುನೊಂದು ನುಡಿಯುತ್ತಾರೆ ಕೃಷಿಕರಾದ ಭಾರತಿ.

ಕೊಯ್ಲಿಗೆ ಮಳೆ ಭೀತಿ:ಬಹುತೇಕ ಈ ಭಾಗದಲ್ಲಿ ತೆನೆ ಮೈದಳೆದು ನಿಂತಿದೆ. ಕೆಲವು ಕಡೆ ಭತ್ತದ ಕೊಯ್ಲು ಈಗಾಗಲೇ ಆರಂಭವಾಗಿದೆ. ಆದರೆ, ಮಳೆಯ ಆತಂಕ ಹೆಚ್ಚಿನವರಿಗಿದೆ. ಮೋಡ ಕವಿದ ವಾತಾವರಣ, ಆಗಾಗ ಭೂಮಿಯನ್ನು ಮುತ್ತಿಕ್ಕುವ ಮಳೆಹನಿಗಳು ರೈತರ ಚಿಂತೆಯನ್ನು ಜಾಸ್ತಿ ಮಾಡಿದೆ. ಒಂದು ವಾರದಲ್ಲಿ ತಾಲ್ಲೂಕಿನ ಅಲ್ಲಲ್ಲಿ ಮಳೆ ಸುರಿದಿದೆ. ಮುಂದಿನ 15 ದಿನಗಳ ಕಾಲ ಮೋಡದ ವಾತಾವರಣದ ಸಂಭವವಿದ್ದು ಅಲ್ಪ ಪ್ರಮಾಣದಲ್ಲಿ ಮಳೆ ಬೀಳಬಹುದುಎಂದು ಹವಾಮಾನ ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT