ನಿಸರ್ಗ ಮನೆಗೆ ರಂಭಾಪುರಿ ಶ್ರೀಗಳು

ಶುಕ್ರವಾರ, ಜೂಲೈ 19, 2019
23 °C

ನಿಸರ್ಗ ಮನೆಗೆ ರಂಭಾಪುರಿ ಶ್ರೀಗಳು

Published:
Updated:
Prajavani

ಶಿರಸಿ: ಋಷಿಮುನಿಗಳು ಹಾಕಿಕೊಟ್ಟ ಮಾರ್ಗ ಮರೆತ ಪರಿಣಾಮ ಧಾರ್ಮಿಕ ಮುಖಂಡರಿಗೆ ಸಾಧನೆಗೆ ತೊಡಕಾಗಿದೆ ಎಂದು ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ನುಡಿದರು.

ಇಲ್ಲಿನ ಗಣೇಶನಗರದ ವೇದ ಆರೋಗ್ಯ ಕೇಂದ್ರವಾದ ನಿಸರ್ಗ ಮನೆಯಲ್ಲಿ ನಡೆದ ರಂಭಾಪುರಿ ಶ್ರೀಗಳ ಶುಭಾಗಮನ ಹಾಗೂ ಸಂದೇಶ ಕಾರ್ಯಕ್ರಮದ ಸಾನ್ನಿಧ್ಯವಹಿಸಿ, ಶ್ರೀಗಳು ಮಾತನಾಡಿದರು. ಧರ್ಮ, ಪರಂಪರೆ, ಆದರ್ಶ ಕಲಿಸುವ ಮಠಾಧಿಪತಿಗಳ ಆರೋಗ್ಯ ಸಮಸ್ಯೆ ಹೆಚ್ಚಿದ್ದು, ನಿಸರ್ಗಮನೆ ಇವೆಲ್ಲ ಸಮಸ್ಯೆಗಳಿಗೂ ಪರಿಹಾರ ನೀಡಲಿದೆ. ಶರೀರ ಸದೃಢವಾಗಿದ್ದರೆ ಧರ್ಮ ಸಾಧ‌ನೆ ಮಾತ್ರವಲ್ಲ ಸಾಮಾಜಿಕ ಕಾರ್ಯವನ್ನೂ ಮಾಡಬಹುದು. ಆದರೆ ಒತ್ತಡದ ಜೀವನ ಸಮಾಜದ ಪ್ರತಿಯೊಂದು ರಂಗವನ್ನು ವ್ಯಾಪಿಸಿದೆ. ಇದರೊಂದಿಗೆ ಮಠಾಧಿಪತಿಗಳ ಮಾನಸಿಕ ವ್ಯಾಧಿಯೂ ಹೆಚ್ಚಿದೆ. ನಿಸರ್ಗ ಚಿಕಿತ್ಸೆ ಮೂಲಕ ಇದರ ನಿವಾರಣೆ ಮಾಡಿಕೊಳ್ಳಬಹುದು ಎಂದರು.

ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ನಿಸರ್ಗ ಮನೆಯು ಆರೋಗ್ಯ ಮನೆಯಾಗಿದೆ. ಅನಾರೋಗ್ಯವನ್ನು ನಿವೃತ್ತಿ ಮಾಡಲು ಆಧುನಿಕ ವೈದ್ಯ ವ್ಯವಸ್ಥೆ ಸೋತ ಸಂದರ್ಭದಲ್ಲಿಯೂ ನಿಸರ್ಗ ಮನೆ ಆರೋಗ್ಯ ವೃದ್ಧಿಸುವ ಕಾರ್ಯ ಮಾಡುತ್ತಿರುವುದು ಸಾಂಪ್ರದಾಯಿಕ ವೈದ್ಯಕೀಯ ಲೋಕದ ಕೊಡುಗೆಯಾಗಿದೆ’ ಎಂದರು. ಸುಗೂರಿನ ಚನ್ನರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಇದ್ದರು. ಕೇಂದ್ರದ ಮುಖ್ಯಸ್ಥ ವೆಂಕಟರಮಣ ಹೆಗಡೆ ಸ್ವಾಗತಿಸಿದರು. ರಾಜ್ಯ, ಹೊರರಾಜ್ಯಗಳ 43 ಯತಿಗಳು ಇಲ್ಲಿಗೆ ಬಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !