ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲೆಗೆ ಬಿದ್ದ ಅಪರೂಪದ ‘ರೇಸರ್ ಮೀನು’

Last Updated 13 ಫೆಬ್ರುವರಿ 2021, 15:02 IST
ಅಕ್ಷರ ಗಾತ್ರ

ಕಾರವಾರ: ಪಶ್ಚಿಮ ಕರಾವಳಿಯಲ್ಲಿ ಅಪರೂಪವಾಗಿರುವ ‘ರೇಸರ್ ಮೀನು’ಗಳು, ಸ್ಥಳೀಯ ಮೀನುಗಾರರ ಬಲೆಗೆ ಶನಿವಾರ ಬಿದ್ದಿವೆ. ಹವಳದ ದಿಬ್ಬಗಳಲ್ಲಿ ಹೆಚ್ಚಾಗಿ ವಾಸಿಸುವ ಇವು, ಲೈಟ್‌ ಹೌಸ್ ನಡುಗಡ್ಡೆಯ ಸಮೀಪ ಕಾಣಿಸಿಕೊಂಡಿದ್ದವು.

‘ಸಮುದ್ರ ಕುದುರೆ’ಗಳ ಪ್ರಭೇದಕ್ಕೆ ಸೇರಿರುವ ಇವು, ಇತರ ಮೀನುಗಳಂತೆ ನೇರವಾಗಿ ಈಜುವುದಿಲ್ಲ. ತಲೆ ಕೆಳಗೆ ಮಾಡಿಕೊಂಡು, ಮೇಲೆ ಕೆಳಗೆ ಚಲಿಸುತ್ತವೆ. ಪೈಪ್‌ನಂತಹ ಮುಖ, ಪಾರದರ್ಶಕವಾದ ಗಟ್ಟಿ ಶರೀರ ಹೊಂದಿರುತ್ತವೆ. ಅವುಗಳ ಮೇಲೆ ಬೆಳಕು ಬಿದ್ದಾಗ ಬಂಗಾರ ಮತ್ತು ತಾಮ್ರದ ಬಣ್ಣಗಳು ಪ್ರತಿಫಲಿಸುತ್ತವೆ ಎಂದು ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಶಿವಕುಮಾರ ಹರಗಿ ತಿಳಿಸಿದ್ದಾರೆ.

ಮೀನುಗಾರರು ಹೇಳುವ ಪ್ರಕಾರ ಈ ಮೀನುಗಳು 300 ಗ್ರಾಂವರೆಗೆ ತೂಕ ಹೊಂದಿರುತ್ತವೆ. ಆಲಂಕಾರಿಕ ಉದ್ದೇಶಕ್ಕಾಗಿ ಅಕ್ವೇರಿಯಂಗಳಲ್ಲಿ ಸಾಕಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT