ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ದಾಖಲೆಯ ₹1,599.07 ಕೋಟಿ ವಹಿವಾಟು

2020-21ನೇ ಸಾಲಿನಲ್ಲಿ ದಿ ಶಿರಸಿ ಅರ್ಬನ್ ಸಹಕಾರ ಬ್ಯಾಂಕ್ ಸಾಧನೆ
Last Updated 26 ನವೆಂಬರ್ 2021, 16:21 IST
ಅಕ್ಷರ ಗಾತ್ರ

ಶಿರಸಿ: 2020–21ನೇ ಆರ್ಥಿಕ ವರ್ಷದಲ್ಲಿ ದಿ ಶಿರಸಿ ಅರ್ಬನ್ ಸಹಕಾರ ಬ್ಯಾಂಕ್ ದಾಖಲೆಯ ₹ 1,599.07 ಕೋಟಿ ವಹಿವಾಟು ನಡೆಸುವುದರೊಂದಿಗೆ ₹ 5.39 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಜಯದೇವ ನೀಲೇಕಣಿ ತಿಳಿಸಿದ್ದಾರೆ.

‘ಕೋವಿಡ್ ಸಂಕಷ್ಟ ಸ್ಥಿತಿಯ ನಡುವೆಯೂ ಸಂಸ್ಥೆ ಸದಸ್ಯರ ವಿಶ್ವಾಸ ಗಳಿಸುತ್ತ ಕಳೆದ ವರ್ಷಕ್ಕಿಂತ ಹೆಚ್ಚು ವಹಿವಾಟು ನಡೆಸಿದೆ. ಠೇವಣಿ ₹ 1,008.29 ಕೋಟಿ, ಸಾಲ ಮತ್ತು ಮುಂಗಡ ₹ 590.78 ಕೋಟಿ, ದುಡಿಯುವ ಬಂಡವಾಳ ₹ 1,127.41 ಕೋಟಿಗೆ ಏರಿಕೆಯಾಗಿದ್ದು, ₹ 8.40 ಕೋಟಿ ನಿರ್ವಹಣಾ ಲಾಭ ಗಳಿಸಲಾಗಿದೆ’ ಎಂದು ತಿಳಿಸಿದ್ದಾರೆ.

‘ಬ್ಯಾಂಕಿನ ಸದಸ್ಯರ ಸಂಖ್ಯೆ 44,536 ದಾಟಿದೆ. ಕಳೆದ ವರ್ಷ ₹ 73.44 ಕೋಟಿ ಇದ್ದ ಆದಾಯ, ಈ ಬಾರಿ ₹85.83 ಕೋಟಿಗೆ ಏರಿಕೆಯಾಗಿದೆ. ಉತ್ತಮ ವಹಿವಾಟಿನ ಮೂಲಕ ರಾಜ್ಯದ 264 ಪಟ್ಟಣ ಸಹಕಾರಿ ಬ್ಯಾಂಕುಗಳ ಪೈಕಿ ಅಗ್ರ ಹತ್ತರ ಪಟ್ಟಿಯಲ್ಲಿ ಸ್ಥಾನ ಭದ್ರಪಡಿಸಿಕೊಂಡಿದೆ’ ಎಂದು ಹೇಳಿದ್ದಾರೆ.

‘₹ 590.78 ಕೋಟಿ ಸಾಲ ವಿತರಿಸಲಾಗಿದ್ದು, ಈ ಪೈಕಿ ಆದ್ಯತಾ ವಲಯಕ್ಕೆ ₹ 294.70 ಕೋಟಿ ಮತ್ತು ದುರ್ಬಲ ವರ್ಗದವರಿಗೆ ₹ 48.43 ಕೋಟಿ ಸಾಲ ವಿತರಿಸಲಾಗಿದೆ. ತಂತ್ರಜ್ಞಾನಗಳ ಅಳವಡಿಕೆಯಲ್ಲೂ ಸಂಸ್ಥೆ ಮುಂಚೂಣಿಯಲ್ಲಿದ್ದು ಗ್ರಾಹಕರಿಗೆ ಅಗತ್ಯ ಸೇವೆ ಒದಗಿಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT