ಸೋಮವಾರ, ಸೆಪ್ಟೆಂಬರ್ 20, 2021
25 °C
ಕಾರ್ಮಿಕ ದಿನಾಚರಣೆ: ವಿವಿಧ ರಂಗಗಳ ಶ್ರಮಜೀವಿಗಳಿಗೆ ಸನ್ಮಾನ

ಕಾರ್ಮಿಕರಿಗೆ ಮೀಸಲಾತಿ ಜಾರಿಯಾಗಲಿ: ಜಾರ್ಜ್ ಫರ್ನಾಂಡಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಅಸಂಘಟಿತ ಕಾರ್ಮಿಕರು ಸಂಘಟನೆಯಾದಾಗ ಅವರಿಗೆ ಬಲ ಬರುತ್ತದೆ. ಶ್ರಮಜೀವಿಗಳನ್ನು ಉದ್ಧಾರ ಮಾಡಲು ಸರ್ಕಾರಗಳು ಅವರಿಗೆ ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ನೀಡಬೇಕು’ ಎಂದು ಸೇಂಟ್ ಮಿಲಾಗ್ರಿಸ್ ಸೌಹಾರ್ದ ಸಹಕಾರ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಾರ್ಜ್ ಫರ್ನಾಂಡಿಸ್ ಅಭಿಪ್ರಾಯ ಪಟ್ಟರು. 

ನಗರದಲ್ಲಿ ಭಾರತೀಯ ಮಜ್ದೂರ್ ಕಾಂಗ್ರೆಸ್‌ನ ಜಿಲ್ಲಾ ಘಟಕ ಬುಧವಾರ ಹಮ್ಮಿಕೊಂಡ ಕಾರ್ಮಿಕ ದಿನಾಚರಣೆಯಲ್ಲಿ ಅವರು ಮಾತನಾಡಿದರು. 

‘ನಮ್ಮ ಜಿಲ್ಲೆಯೊಂದರಲ್ಲೇ ಸಾವಿರಾರು ಮಂದಿ ಅಸಂಘಟಿತ ಕಾರ್ಮಿಕರಿದ್ದಾರೆ. ಅವರಿಗೆ ಕಾರ್ಮಿಕ ಸಂಘಟನೆಗಳ ಬಗ್ಗೆ ಅರಿವು ಮೂಡಿಸಬೇಕು. ಪ್ರಾಮಾಣಿಕವಾಗಿ ಬೆವರು ಸುರಿಸಿ ಕೆಲಸ ಮಾಡಿದವರಿಗೆ ಸಂಬಳ ನೀಡಲು ಸತಾಯಿಸುವವರನ್ನುಗಟ್ಟಿ ಧ್ವನಿಯಿಂದ ಪ್ರಶ್ನಿಸಲು ಇದರಿಂದ ಸಾಧ್ಯವಾಗುತ್ತದೆ’ ಎಂದರು. 

‘ಎಲ್ಲರಿಗೂ ಆಕಾಶಕ್ಕೆ ಏಣಿ ಹಾಕುವಂತಹ ಮಹತ್ತರವಾದ ಬಯಕೆ ಇರಬೇಕು. ಆಗ ಮಾತ್ರ ಮುಂದೆ ಬರಲು ಸಾಧ್ಯ. ತಾನು ಮಾಡುತ್ತಿರುವ ಕೆಲಸಕ್ಕಿಂತಲೂ ಮೇಲಿನ ಹಂತಕ್ಕೆ ತಲುಪಲು ಶ್ರಮಿಸಬೇಕು. ಇದಕ್ಕೆ ಪ್ರಾಮಾಣಿಕತೆ, ಅಧ್ಯಯನ, ಯೋಜನೆ ಮತ್ತು ತಾನೇ ಖುದ್ದು ಕೆಲಸ ಮಾಡುವ ಹುಮ್ಮಸ್ಸಿರಬೇಕು’ ಎಂದು ಸಲಹೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ರಾಮನಾಯ್ಕ ಮಾತನಾಡಿ, ‘ಸಂಘಟನೆಗಳು ಅಸಂಘಟಿತ ಹಾಗೂ ಧ್ವನಿಯಿಲ್ಲದ ಕಾರ್ಮಿಕರಿಗೆ ಆಸರೆಯಾಗಬೇಕು. ಮನುಷ್ಯನಿಗೆ ಅನುಭವಕ್ಕಿಂತ ದೊಡ್ಡ ವಿದ್ಯೆಯಿಲ್ಲ. ಇದಕ್ಕೆ ಕಾರ್ಯಕ್ರಮ ಉದ್ಘಾಟಿಸಿದ ಉಮಾಬಾಯಿ ಅವರೇ ಸಾಕ್ಷಿ. 18 ವರ್ಷಗಳಿಂದ ಸಿಮೆಂಟ್, ಕಾಂಕ್ರೀಟ್ ಕೆಲಸಗಳನ್ನು ಅವರು ಮಾಡುತ್ತಿದ್ದಾರೆ. ಈ ರೀತಿಯ ಅನೇಕ ಕಾರ್ಮಿಕರು ವಿವಿಧ ರಂಗಗಳಲ್ಲಿದ್ದಾರೆ. ಅವರೆಲ್ಲರ ಸಂಘಟನೆಯಾಗಲಿ’ ಎಂದು ಆಶಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಕಟ್ಟಡ ಕಾರ್ಮಿಕರಾದ ಉಮಾಬಾಯಿ ಗುನಗಿ ಹಾಗೂ ವಿವಿಧ ವಿಭಾಗಗಳ ಕಾರ್ಮಿಕರನ್ನು ಸನ್ಮಾನಿಸಲಯಿತು. 

ಪ್ರಮುಖರಾದ ಅರವಿಂದ ತೆಂಡೂಲ್ಕರ್, ವಿಷ್ಣು ಹರಿಕಾಂತ, ಮಕ್ಬೂಲ್ ಶೇಖ್ ಇದ್ದರು. ಸಂಘಟನೆಯ ರಾಜ್ಯ ಘಟಕದ ಕಾರ್ಯದರ್ಶಿ ಸಂತೋಷ ಗುರುಮಠ ಸ್ವಾಗತಿಸಿದರು. ಸುದರ್ಶನ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು