ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

70 ಕುಟುಂಬಗಳಿಗೆ ಜೀವನೋಪಾಯ ಸಾಮಗ್ರಿ ವಿತರಣೆ

Last Updated 8 ಏಪ್ರಿಲ್ 2020, 15:22 IST
ಅಕ್ಷರ ಗಾತ್ರ

ಕುಮಟಾ: ಲಾಕ್‌ಡೌನ್ ಕಾರಣದಿಂದ ಆದಾಯ ನಿಂತು ಹೋಗಿರುವ ತಾಲ್ಲೂಕಿನ ಮೂರೂರು ಗ್ರಾಮದ70 ಪರಿಶಿಷ್ಟ ಹಾಗೂ10 ಕಡು ಬಡ ಕುಟುಂಬಗಳಿಗೆ ನಿವೃತ್ತ ಪ್ರಾಚಾರ್ಯ ಡಾ.ಮಹೇಶ ಅಡಕೋಳಿ ಬುಧವಾರ ತಮ್ಮ ಮನೆಯಲ್ಲಿ ಅಗತ್ಯ ಸಾಮಗ್ರಿಯನ್ನು ಉಚಿತವಾಗಿ ವಿತರಿಸಿದರು.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಹೊರಗೆ ಹೋಗಿ ಕೂಲಿ ಕೆಲಸ ಮಾಡುವುದು ಸಹ ಅಸಾಧ್ಯವಾಗಿದೆ. ಪ್ರತಿಕುಟುಂಬದ ಸದಸ್ಯರಿಗೆ ತಲಾ ಒಂದುಕೆ.ಜಿಈರುಳ್ಳಿ ಹಾಗೂ ಆಲೂಗಡ್ಡೆ, ಐದು ತೆಂಗಿನ ಕಾಯಿಗಳ ಒಂದು ಕಿಟ್ ವಿತರಿಸಲಾಯಿತು.

‘ಹಲವಾರು ವರ್ಷಗಳಿಂದ ನಮ್ಮ ನಡುವೆ ಇರುವ ಊರಿನ ಬಡ ಕುಟುಂಬದವರಿಗೆ ಈಗ ದುಡಿಮೆಗಾಗಿ ಮನೆಯ ಹೊರಗೆ ಹೋಗಲು ಸಾಧ್ಯವಾಗದಂಥ ಬಿಕ್ಕಟ್ಟಿನ ಸ್ಥಿತಿ ಎದುರಾಗಿದೆ. ನಾವು ಮಾಡುವ ಸಹಾಯ ಅತಿ ಚಿಕ್ಕದು. ಆದರೆ, ಪರಸ್ಪರರ ಕಷ್ಟಕ್ಕೆ ಮಿಡಿಯುವುದು ಸಾಧ್ಯವಿದೆ’ ಎಂದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯ್ತಿ ಸದಸ್ಯ ಬಾಲಕೃಷ್ಣ ನಾಯ್ಕ, ಸ್ಥಳೀಯರಾದ ಕೃಷ್ಣ ನಾಯ್ಕ, ಮಿಥುನ ನಾಯ್ಕ, ಮೂರ್ತಿ ನಾಯ್ಕ, ಸತೀಶ ಶೆಟ್ಟಿ, ನಾಗೇಶ ಮುಕ್ರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT