ನಾಲ್ವರು ಚುನಾವಣಾಧಿಕಾರಿ ನೇಮಕ

7
ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ

ನಾಲ್ವರು ಚುನಾವಣಾಧಿಕಾರಿ ನೇಮಕ

Published:
Updated:
Deccan Herald

ಶಿರಸಿ: ನಗರಸಭೆ ಚುನಾವಣೆಯ ಪ್ರಯುಕ್ತ ನಗರದ 31 ವಾರ್ಡ್‌ಗಳಿಗೆ ನಾಲ್ವರು ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ. 1ರಿಂದ 8ನೇ ವಾರ್ಡ್‌ವರೆಗೆ ಕೃಷಿ ಇಲಾಖೆ ಉಪನಿರ್ದೇಶಕ ಟಿ.ಎಚ್.ನಟರಾಜ್, 9ರಿಂದ 16ನೇ ವಾರ್ಡ್‌ಗಳಿಗೆ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಶಶಿಕಾಂತ ಕೋಟಿಮನಿ, 17ರಿಂದ 24ನೇ ವಾರ್ಡ್‌ಗಳಿಗೆ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ವಿಜಯಕುಮಾರ ಆಜೂರ್, 25ರಿಂದ 31ನೇ ವಾರ್ಡ್‌ಗಳಿಗೆ ಉಪವಿಭಾಗಾಧಿಕಾರಿ ಕೆ.ರಾಜು ಮೊಗವೀರ ಚುನಾವಣಾಧಿಕಾರಿಯಾಗಿದ್ದಾರೆ.

ಚುನಾವಣೆ ಸಿದ್ಧತೆ ಕುರಿತು ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ರಾಜು ಮೊಗವೀರ ಅವರು, ‘ಒಟ್ಟು 57 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. 48,468 ಮತದಾರರು ಇದ್ದಾರೆ. ಪಾರದರ್ಶಕವಾಗಿ ಚುನಾವಣೆ ನಡೆಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. 1ರಿಂದ 24ನೇ ವಾರ್ಡ್‌ಗಳ ಚುನಾವಣೆ ಸಂಬಂಧಿತ ಪ್ರಕ್ರಿಯೆಗಳು ನಗರಸಭೆಯಲ್ಲಿ ಹಾಗೂ ಇನ್ನುಳಿದ ವಾರ್ಡ್‌ಗಳದ್ದು ಉಪವಿಭಾಗಾಧಿಕಾರಿ ಕಚೇರಿಯಲ್ಲಿ ನಡೆಯುತ್ತದೆ’ ಎಂದರು.

ಈ ಬಾರಿ ಮತದಾನಕ್ಕೆ ಇವಿಎಂ ಮಷಿನ್ ಬಳಸಲಾಗುತ್ತಿದೆ. ಈಗಾಗಲೇ ಚುನಾವಣಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ತರಬೇತಿ ನೀಡಲಾಗಿದೆ. ಪ್ರತಿ ಬೂತ್‌ಗೆ ನಾಲ್ವರು ಅಧಿಕಾರಿಗಳನ್ನು ನಿಯೋಜಿಸಲಾಗುವುದು. ಶೇ 20ರಷ್ಟು ಹೆಚ್ಚುವರಿ ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ಬಳಸಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ನಾಮಪತ್ರ ಸಲ್ಲಿಕೆ ಆ.10ರಿಂದ ಆರಂಭವಾಗಲಿದ್ದು, ಆ.17 ಕೊನೆಯ ದಿನವಾಗಿದೆ. 18ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಮಾರಿಕಾಂಬಾ ಪದವಿಪೂರ್ವ ಕಾಲೇಜಿನಲ್ಲಿ ಮಸ್ಟರಿಂಗ್, ಡಿಮಸ್ಟರಿಂಗ್ ಹಾಗೂ ಮತ ಎಣಿಕೆ ನಡೆಯುತ್ತದೆ. ಪರಿಶಿಷ್ಟ ಜಾತಿಗೆ ಮೀಸಲಿರುವ ವಾರ್ಡ್‌ನಲ್ಲಿ ಆ ಸಮುದಾಯದ ಅಭ್ಯರ್ಥಿ ಇಲ್ಲದಿದ್ದ ಪಕ್ಷದಲ್ಲಿ ಪರಿಶಿಷ್ಟ ಪಂಗಡದ ಅಭ್ಯರ್ಥಿ ಸ್ಪರ್ಧಿಸಬಹುದು. ಅದೇ ರೀತಿ ಹಿಂದುಳಿದ ’ಅ’ ವರ್ಗದ ಅಭ್ಯರ್ಥಿ ಸಂಬಂಧಿತ ವಾರ್ಡ್‌ನಲ್ಲಿ ಇಲ್ಲದಿದ್ದಲ್ಲಿ, ಹಿಂದುಳಿದ ‘ಬ’ ವರ್ಗದ ಅಭ್ಯರ್ಥಿ ಸ್ಪರ್ಧಿಸಬಹುದು ಎಂದು ವಿವರಿಸಿದರು. ತಹಶೀಲ್ದಾರ್ ಎಂ.ಆರ್.ಕುಲಕರ್ಣಿ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !