ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಟಾ: ಮನಕಲುಕಿದ ಮಕ್ಕಳ ಕಳೆದುಕೊಂಡ ಪಾಲಕರ ಅಳು

Last Updated 24 ಏಪ್ರಿಲ್ 2022, 14:12 IST
ಅಕ್ಷರ ಗಾತ್ರ

ಕುಮಟಾ: ಅಂಕೋಲಾ ತಾಲ್ಲೂಕಿನ ಕರಿಕಲ್ ಗ್ರಾಮದ ಗಂಗಾವಳಿ ನದಿಯಲ್ಲಿ ಭಾನುವಾರ ಮುಳುಗಿ ಮೃತಪಟ್ಟ ಮೂವರು ವಿದ್ಯಾರ್ಥಿಗಳ ಪೈಕಿ ಕುಮಟಾ ತಾಲ್ಲೂಕಿನ ಅಘನಾಶಿನಿ ಗ್ರಾಮದ ವಿದ್ಯಾರ್ಥಿ ನಾಗೇಂದ್ರ ನಾಯ್ಕ ಮನೆಯಲ್ಲಿ ಹೆತ್ತವರು ಮನೆಯ ಮಗನ ಕಳೆದುಕೊಂಡ ದುಃಖದಲ್ಲಿ ರೋದಿಸುತ್ತಿರುವ ದೃಶ್ಯ ಮನ ಕಲಕಿತು.

'ಪುಟ್ಟಾ ...... ಏ ಪುಟ್ಟಾ... ಎಲ್ಲೋದೆಯೋ? ಏನಾಯ್ತೋ ನಿಂಗೆ?' ಎಂದು ತಾಯಿ ವೀಣಾ ನಾಯ್ಕ, ಅಜ್ಜಿ, ಚಿಕ್ಕಮ್ಮ ಅಳುತ್ತಿದ್ದರೆ, 'ಎಲ್ಲವೂ ಮುಗಿದೋಯ್ತು' ಎಂದು ಗೊಣಗುತ್ತಾ ತಂದೆ ದಾಸು ನಾಯ್ಕ ಹಣೆ ಚಚ್ಚಿಕೊಳ್ಳುತ್ತಿರುವುದನ್ನು ನೋಡಿ ಅಲ್ಲಿದ್ದವರು ದುಃಖಿತರಾದರು.

ಮೃತ ಯುವಕ ನಾಗೇಂದ್ರನ ತಂದೆ-ತಾಯಿ ಇಬ್ಬರೂ ಕೂಲಿ ಮಾಡಿ ಬದುಕುವವರು. ಅವರ ಕಿರಿಯ ಮಗ ಶಾಲೆಗೆ ಹೋಗುತ್ತಿದ್ದಾನೆ. ಮೃತಪಟ್ಟ ಇನ್ನೊಬ್ಬ ಯುವಕ ಕೋನಳ್ಳಿ ಗ್ರಾಮದ ದಿಲೀಪ್ ನಾಯ್ಕ ಕುಮಟಾ ಬಾಳಿಗಾ ಕಲಾ ವಿಜ್ಞಾನ ಮಹಾವಿದ್ಯಾಲಯದಲ್ಲಿ ಬಿ.ಎ ಮೂರನೇ ಸೆಮಿಸ್ಟರ್ ಓದುತ್ತಿದ್ದಾನೆ.

ಮೃತನ ತಂದೆ-ತಾಯಿ ಬಾಬು ನಾಯ್ಕ ಹಾಗೂ ವೀಣಾ ನಾಯ್ಕ ಕೃಷಿ ಜೊತೆ ಟೈಲರಿಂಗ್ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಆತನ ಮೃತ ದೇಹ ತರಲು ಇಡೀ ಕುಟುಂಬ ಅಂಕೋಲಾಕ್ಕೆ ತೆರಳಿದ್ದು ಮಗನಿಲ್ಲದ ಮನೆ ಅಕ್ಷರಶಃ ಖಾಲಿ ಎನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT