ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾತ್ರಿಪಾಳಿ ಕೆಲಸಕ್ಕೆ ನಿಯಮ: ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಭರವಸೆ

Last Updated 29 ಫೆಬ್ರುವರಿ 2020, 9:42 IST
ಅಕ್ಷರ ಗಾತ್ರ

ಶಿರಸಿ: ಐಟಿ, ಬಿಟಿ ಕ್ಷೇತ್ರದಲ್ಲಿ ರಾತ್ರಿ ಪಾಳಿ ಕೆಲಸ ಮಾಡುವ ಮಹಿಳೆಯರಿಗೆ ನೀಡಿರುವ ಸುರಕ್ಷತೆಯ ಮಾದರಿಯಲ್ಲಿ ಇತರ ಕ್ಷೇತ್ರಗಳ ಮಹಿಳೆಯರಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಅನುಕೂಲವಾಗುವಂತೆ ನಿಯಮ ರೂಪಿಸಲಾಗುವುದು ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.

ಶುಕ್ರವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರು, ನಿರ್ದೇಶಕರು, ಸಿಬ್ಬಂದಿ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ‘ಒಂದು ವರ್ಷದೊಳಗಾಗಿ ಕಾರ್ಮಿಕ ಇಲಾಖೆಯನ್ನು ಅಪರೂಪದ ಇಲಾಖೆಯಾಗಿ ರೂಪಿಸಲಾಗುವುದು. ಕಾಯ್ದೆ ತಿದ್ದುಪಡಿ ತರುವ ಜತೆಗೆ, ಹೊಸ ಯೋಜನೆ ಜಾರಿಗೆ ತರಲು ಯೋಚಿಸಲಾಗಿದೆ. ಮಹಿಳಾ ಕಾರ್ಮಿಕ ಸುರಕ್ಷತೆ ದೃಷ್ಟಿಯಿಂದ ಹೊಸ ನಿಯಮ ರೂಪಿಸಲಾಗುವುದು ಎಂದರು.

ಸಹಕಾರ ಕಾಯ್ದೆಗೆ ತಿದ್ದುಪಡಿ ತರಲು ಪ್ರಯತ್ನಿಸಲಾಗುವುದು. ಜಿಲ್ಲೆಯಲ್ಲಿ ಇಎಸ್‌ಐ ಆಸ್ಪತ್ರೆ ತರಲು ಪ್ರಯತ್ನಿಸಲಾಗುವುದು ಎಂದರು. ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಸ್.ಎಲ್.ಘೋಟ್ನೇಕರ್ ಮಾತನಾಡಿ, ‘ಏಪ್ರಿಲ್‌ನಲ್ಲಿ ಕೆಡಿಸಿಸಿ ಬ್ಯಾಂಕ್ ಶತಮಾನೋತ್ಸವ ಆಚರಿಸಲು ಯೋಚಿಸಲಾಗಿದೆ. ಸಚಿವರು ಸರ್ಕಾರದಿಂದ ₹ 5 ಕೋಟಿ ನೆರವು ನೀಡಿದರೆ, ಶತಮಾನೋತ್ಸವ ಭವನ ನಿರ್ಮಿಸಲಾಗುವುದು’ ಎಂದರು. ಉಪಾಧ್ಯಕ್ಷ ಭಾಸ್ಕರ ಹೆಗಡೆ ಕಾಗೇರಿ, ನಿರ್ದೇಶಕರಾದ ಮಂಕಾಳ ವೈದ್ಯ, ಜಿ.ಆರ್.ಹೆಗಡೆ ಸೋಂದಾ, ಮೋಹನದಾಸ ನಾಯಕ, ಶಿವಾನಂದ ಕಡತೋಕ, ಜಿ.ಟಿ.ಹೆಗಡೆ ತಟ್ಟೀಸರ, ವ್ಯವಸ್ಥಾಪಕ ನಿರ್ದೇಶಕ ಪಿ.ಎಸ್.ಬಾಂದುರ್ಗಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT