ಸೋಮವಾರ, ನವೆಂಬರ್ 18, 2019
28 °C

ವಿಜ್ಞಾನ ಸ್ಪರ್ಧೆ: ರಾಷ್ಟ್ರಕ್ಕೆ ದ್ವಿತೀಯ

Published:
Updated:
Prajavani

ಶಿರಸಿ: ಹೈದ್ರಾಬಾದ್‌ನ ಐಐಟಿಯ ಮೆಕ್ಇಂಟನ್೯ ಹಾಗೂ ಇ–ಸೆಲ್‌ ಜಂಟಿಯಾಗಿ ಇತ್ತೀಚೆಗೆ ಆಯೋಜಿಸಿದ್ದ ರಾಷ್ಟ್ರಮಟ್ಟದ ವೆಟ್‌ಲ್ಯಾಂಡ್ ಚಾಂಪಿಯನ್‌ಷಿಪ್ 2019 ವಿಜ್ಞಾನ ಸ್ಪರ್ಧೆಯಲ್ಲಿ ಇಲ್ಲಿನ ಎಂ.ಎಂ. ಕಲಾ ಮತ್ತು ವಿಜ್ಞಾನ ಕಾಲೇಜಿನ ವಿಜ್ಞಾನ ಪದವಿ ಅಂತಿಮ ವರ್ಷದ ವಿದ್ಯಾರ್ಥಿ ಪ್ರಣವ್‌ಭಾರದ್ವಾಜ್ ನೇತೃತ್ವದ ತಂಡ ರನ್ನರ್‌ ಅಪ್ ಬಹುಮಾನ ಪಡೆದುಕೊಂಡಿದೆ. ಬಹುಮಾನವು ಟ್ರೋಫಿ, ಪ್ರಶಸ್ತಿಪತ್ರ, ₹ 15ಸಾವಿರ ನಗದು ಮೊತ್ತವನ್ನು ಒಳಗೊಂಡಿದೆ. 

‘ಬಯೊಡಿಗ್ರೆಡೆಬಲ್ ಡೈ ಸೆನ್ಸಿಟೈಸರ್ ಸೋಲಾರ್ ಸೆಲ್ಸ್’ ಕುರಿತು ವಿದ್ಯಾರ್ಥಿಗಳು ವಿಷಯ ಮಂಡನೆ ಮಾಡಿದ್ದರು. ಕುಮಟಾ ಎ.ವಿ.ಬಾಳಿಗಾ ಕಾಲೇಜಿನ ಅಲಿಷಾ ಫರ್ನಾಂಡಿಸ್, ಸೌಂದರ್ಯ ಅತ್ತರವಾಲ, ಹೊನ್ನಾವರ ಎಸ್‌ಡಿಎಂ ಕಾಲೇಜಿನ ಜಾನ್ಸನ್ ಪುರ್ಟಾಡೊ ತಂಡದಲ್ಲಿದ್ದರು. ವಿವಿಧ ಹಂತಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಆಯ್ಕೆಯಾಗಿದ್ದ ದೇಶದ ಬೇರೆ ಬೇರೆ ಕಾಲೇಜುಗಳ ಬಿ.ಎಸ್ಸಿ, ಎಂ.ಎಸ್ಸಿ, ಸಂಶೋಧನಾ ವಿದ್ಯಾರ್ಥಿಗಳ 50 ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ಪ್ರತಿಕ್ರಿಯಿಸಿ (+)