ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಗೆ ಬೇಡಿಕೆ: ಪ್ರಸ್ತಾವ ಸಲ್ಲಿಸಲು ಸೂಚನೆ

ಜಿಲ್ಲಾ ಪಂಚಾಯ್ತಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಆರ್.ವಿ.ದೇಶಪಾಂಡೆ
Last Updated 1 ಫೆಬ್ರುವರಿ 2019, 12:48 IST
ಅಕ್ಷರ ಗಾತ್ರ

ಕಾರವಾರ: ಗಂಗಾವಳಿ ನದಿಯಿಂದ ಗೋಕರ್ಣಕ್ಕೆ ಕುಡಿಯುವ ನೀರು ಪೂರೈಕೆ ಯೋಜನೆಯ ಕಾಮಗಾರಿ ಬಗ್ಗೆ ಜಿಲ್ಲಾ ಪಂಚಾಯ್ತಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಯಾಯಿತು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ, ಯೋಜನೆಯ ಪ್ರಗತಿ ಕುರಿತು ನಗರ ನೀರು ಸರಬರಾಜು ಇಲಾಖೆಯ ಅಧಿಕಾರಿಯಿಂದ ಮಾಹಿತಿ ಪಡೆದುಕೊಂಡರು.

‘ತಮ್ಮಜಾಗದಮೂಲಕವೇ ಪೈಪ್‌ಲೈನ್ ಸಾಗುತ್ತಿದೆ. ಅದರಿಂದ ತಮಗೂ ಕುಡಿಯುವ ನೀರು ಪೂರೈಕೆ ಮಾಡಬೇಕುಎಂದು ಅಂಕೋಲಾ ತಾಲ್ಲೂಕಿನ ಕೆಲವು ಗ್ರಾಮದವರು ಪಟ್ಟುಹಿಡಿದಿದ್ದಾರೆ. ₹ 36 ಕೋಟಿ ವೆಚ್ಚದ ಯೋಜನೆ ಸದ್ಯಕ್ಕೆ ನಿಂತಿದೆ’ ಎಂದು ಅಧಿಕಾರಿತಿಳಿಸಿದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕಿ ರೂಪಾಲಿ ನಾಯ್ಕ, ‘ಅಂಕೋಲಾ ತಾಲ್ಲೂಕಿನ ಮೊರಬಾ ಮತ್ತು ಮೊಗಟಾ ಗ್ರಾಮ ಪಂಚಾಯ್ತಿಗಳ ಮೂಲಕಪೈಪ್‌ಲೈನ್ ಹಾದುಹೋಗುತ್ತದೆ. ಅಲ್ಲಿನ ಜನ ಕಾಮಗಾರಿಗೆ ವಿರೋಧ ಮಾಡಿಲ್ಲ. ಈಯೋಜನೆಯಲ್ಲಿ ತಮಗೂ ನೀರು ಕೊಡಿ ಎಂದುಮನವಿ ಮಾಡಿದ್ದಾರೆ. ಅಲ್ಲಿ ನೀರಿನ ಸಮಸ್ಯೆ ಹೆಚ್ಚಿದೆ. ನೀರು ಕೊಡದಿದ್ದರೆ ಕಾಮಗಾರಿ ಮುಂದುವರಿಸಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಅವರ ಬೇಡಿಕೆಯಲ್ಲಿ ಅರ್ಥವಿದೆ’ ಎಂದು ಹೇಳಿದರು.

ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮಾತನಾಡಿ, ‘ನಿಗದಿಯಂತೆ ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಮುಕ್ತಾಯವಾಗಬೇಕಿದೆ. ಅಗತ್ಯವಿದ್ದರೆಪೊಲೀಸ್ಬಂದೋಬಸ್ತಿನಲ್ಲಿ ಕಾಮಗಾರಿ ನಡೆಸಿ’ ಎಂದು ಸೂಚಿಸಿದರು. ಮಧ್ಯಪ್ರವೇಶಿಸಿದ ದೇಶಪಾಂಡೆ, ‘ಹಳ್ಳಿಗಳ ಜನ ನೀರು ಕೇಳಿದ್ದರಲ್ಲಿ ತಪ್ಪಿಲ್ಲ. ನೀರಿನ ಬೇಡಿಕೆ ಇರುವ ಹಳ್ಳಿಗಳಿಗೆ ಪ್ರತ್ಯೇಕ ಪ್ರಸ್ತಾವ ಕಳುಹಿಸಿ, ಕಾಮಗಾರಿಯನ್ನು ಮುಂದುವರಿಸಿ’ ಎಂದು ತಾಕೀತು ಮಾಡಿದರು.

ಉಪ್ಪು ನೀರಿನ ಸಮಸ್ಯೆ:ಸಮುದ್ರದಲ್ಲಿ ಉಬ್ಬರ ಬಂದಾಗ ಕರಾವಳಿಯ ನದಿಗಳಲ್ಲಿ ಉಪ್ಪುನೀರು ತುಂಬಿಕೊಳ್ಳುತ್ತದೆ. ಇದರಿಂದ ಬಾವಿಗಳಲ್ಲಿ ನೀರಿದ್ದರೂ ಬಳಕೆಗೆ ಸಾಧ್ಯವಾಗುತ್ತಿಲ್ಲ. ಇದಕ್ಕೆ ಶಾಶ್ವತ ಪರಿಹಾರವಾಗಿ ನದಿಯಲ್ಲಿ ಅಡ್ಡಲಾಗಿ ಗೇಟು ಅಳವಡಿಸುವುದು ಸೂಕ್ತ ಎಂದು ಕರಾವಳಿ ಭಾಗದಶಾಸಕರಾದ ಸುನೀಲ್ ನಾಯ್ಕ, ದಿನಕರ ಶೆಟ್ಟಿ ಹಾಗೂ ರೂಪಾಲಿ ನಾಯ್ಕ ಸಚಿವರ ಗಮನಕ್ಕೆ ತಂದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ‘ಎಲ್ಲೆಲ್ಲಿಕೆಲಸಆಗಬೇಕು ಎಂದುಒಂದು ವಾರದ ಒಳಗಾಗಿ ಟಾಸ್ಕ್‌ಫೋರ್ಸ್‌ಗೆ ಪ್ರಸ್ತಾವ ಕಳುಹಿಸಿ. ಹಣದ ಲಭ್ಯತೆ ನೋಡಿಕೊಂಡು ಕಾಮಗಾರಿ ಕೈಗೊಳ್ಳಬಹುದು’ ಎಂದು ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ಗೆ ಸೂಚಿಸಿದರು.

ತಾಲ್ಲೂಕು ಪಂಚಾಯ್ತಿ ಸಭೆ ಹಾಗೂಗ್ರಾಮ ಸಭೆಗಳಲ್ಲಿಅಧಿಕಾರಿಗಳು ಭಾಗವಹಿಸುವುದಿಲ್ಲ ಎಂಬ ದೂರುಗಳು ಬರುತ್ತಿವೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಮೂರು ದಿನಗಳ ಒಳಗೆ ಸುತ್ತೋಲೆ ಕಳುಹಿಸಿ ಸಭೆಗಳಿಗೆ ಕಡ್ಡಾಯವಾಗಿ ಹಾಜರಾಗಲು ಸೂಚಿಸಬೇಕು ಎಂದು ದೇಶಪಾಂಡೆ ತಾಕೀತು ಮಾಡಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ರೋಶನ್, ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.

ಕಾಲುಸಂಕ ನಿರ್ಮಾಣಕ್ಕೆ ಅವಕಾಶ:ಶಾಲೆಗಳ ಸಮೀಪ ತೊರೆ, ಹಳ್ಳಗಳಿಗೆ ಕಾಲುಸಂಕ ನಿರ್ಮಾಣ ಮಾಡಲು ₹ 15 ಲಕ್ಷ ನೀಡಲಾಗುತ್ತದೆ. ಈ ಬಗ್ಗೆ ಯೋಜನೆ ಸಿದ್ಧವಾಗಿದೆ. ಲೋಕೋಪಯೋಗಿ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಜತೆಯಾಗಿ ಕಾರ್ಯಕ್ರಮ ರೂಪಿಸಿ ಪ್ರಸ್ತಾವ ಕಳುಹಿಸಿ. ಸಣ್ಣ ಸೇತುವೆಗಳು ದುರ್ಬಲವಾಗಿದ್ದರೂ ತಿಳಿಸಿ. ಖಾಸಗಿ ವಿದ್ಯಾಸಂಸ್ಥೆಗಳ ಬಳಿಯೂ ಕಾಮಗಾರಿ ಹಮ್ಮಿಕೊಳ್ಳಬಹುದು ಎಂದು ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.

ಸಭೆಯಲ್ಲಿ ಕೇಳಿದ್ದು...:

* 134 ಶಿಕ್ಷಕರ ನೇಮಕಕ್ಕೆ ಒಪ್ಪಿಗೆ ಸಿಕ್ಕಿದೆ:ಕಾರವಾರಡಿಡಿಪಿಐ

* 413 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಧ್ಯತೆ: ಜಿಲ್ಲಾಧಿಕಾರಿ

* 12 ಪಂಪ್‌ಹೌಸ್‌ ದುರಸ್ತಿಹಣ ಬಾಕಿ: ಶಾಸಕ ಸುನೀಲ್ ನಾಯ್ಕ ಅಸಮಾಧಾನ

* ಈ ಬಾರಿ 86 ಎಕರೆ ಹಿಪ್ಪುನೇರಳೆ ನಾಟಿ: ರೇಷ್ಮೆ ಇಲಾಖೆ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT