ಮಂಗಳವಾರ, ಜುಲೈ 14, 2020
26 °C

ಕಾರವಾರದಲ್ಲೇ ಕೋವಿಡ್ ಪರೀಕ್ಷೆ ಮಾಡಿಸಿ: ಸತೀಶ ಸೈಲ್ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಗೋವಾದಲ್ಲಿ ಕೆಲಸ ಮಾಡುವ ಕಾರವಾರದ ಕಾರ್ಮಿಕರಿಗೆ ಕೋವಿಡ್ 19 ಪರೀಕ್ಷೆಯನ್ನು ಕಾರವಾರದ ವಿಜ್ಞಾನಗಳ ಸಂಸ್ಥೆಯಲ್ಲೇ ಮಾಡಬೇಕು ಎಂದು ಕಾಂಗ್ರೆಸ್ ಟಾಸ್ಕ್‌ಫೋರ್ಸ್ ಜಿಲ್ಲಾ ಸಮಿತಿಯ ಅಧ್ಯಕ್ಷ ಸತೀಶ ಸೈಲ್ ಒತ್ತಾಯಿಸಿದ್ದಾರೆ.

ಹೊರ ರಾಜ್ಯಗಳಿಂದ ಗೋವಾಕ್ಕೆ ಉದ್ಯೋಗಕ್ಕಾಗಿ ಬರುವವರು ಅಲ್ಲಿನ ಸರ್ಕಾರದ ಆದೇಶದಂತೆ ತಮ್ಮ ಕೋವಿಡ್ 19 ನೆಗೆಟಿವ್ ವರದಿಯನ್ನು ರಾಜ್ಯದ ಗಡಿಯಲ್ಲೇ ಹಾಜರುಪಡಿಸಬೇಕು. ಇದಕ್ಕೆ ತಪ್ಪಿದರೆ ₹ 2,000 ಪಾವತಿಸಿ ಗೋವಾ ರಾಜ್ಯದ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿ ನೌಕರಿಗೆ ತೆರಳಬೇಕಾಗಿದೆ. ಇದರಿಂದ ಬಡ ಕಾರ್ಮಿಕರಿಗೆ ಆರ್ಥಿಕವಾಗಿ ತುಂಬ ಹೊರೆಯಾಗುತ್ತಿದೆ. ಈಗಾಗಲೇ ಹಲವಾರು ನೌಕರರು ಈ ರೀತಿ ಹಣ ಪಾವತಿಸಿ ಪರೀಕ್ಷೆ ಮಾಡಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಕೆಲವು ನೌಕರರನ್ನು ಈ ಪರೀಕ್ಷೆಗಾಗಿ ‘ಕ್ರಿಮ್ಸ್’ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಆದರೆ, ಆಡಳಿತಾತ್ಮಕ ಕಾರಣ ನೀಡಿ ಅವರ ಕೋರಿಕೆಯನ್ನು ನಿರಾಕರಿಸಲಾಗಿತ್ತು. ಈ ಪರೀಕ್ಷೆಯು ಕೇವಲ ಶಿಷ್ಟಾಚಾರದ ಪ್ರಕಾರವೇ ನಡೆಯುವುದಾದರೆ ಜಿಲ್ಲೆಗೆ ಹೆಚ್ಚಿನ ಪ್ರಯೋಜನವಿಲ್ಲ. ಸಂಬಂಧಿತ ಸಿಬ್ಬಂದಿಗೆ ಹೆಚ್ಚು ಒತ್ತಡ ಬೀಳದ ಹಾಗೆ ದಿನಾ ನಿರ್ದಿಷ್ಟ ಸಂಖ್ಯೆಯಷ್ಟು ಮಂದಿಗೆ ಕೈಗೆಟಕುವ ಶುಲ್ಕದಲ್ಲಿ ಪರೀಕ್ಷೆ ಮಾಡಿಸಿ ವರದಿ ನೀಡುವಂತೆ ಸರ್ಕಾರ ತನ್ನ ನಿಬಂಧನೆಯಲ್ಲಿ ಸೂಕ್ತ ಬದಲಾವಣೆ ಮಾಡಲು ಮುಂದಾಗಬೇಕು ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು