ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರಿ ದೇವರ ಗುಡಿ | ಹರಕೆಯ ಉಪ್ಪಿನ ರಾಶಿ ತೆರವು

Last Updated 12 ಜೂನ್ 2019, 12:09 IST
ಅಕ್ಷರ ಗಾತ್ರ

ಕಾರವಾರ:ನಗರದ ಗೀತಾಂಜಲಿವೃತ್ತದಬಳಿ ಇರುವ ಮಾರಿ ದೇವರ ಗುಡಿಯ ಪಕ್ಕದಲ್ಲಿ ಭಕ್ತರು ಹರಕೆಯ ರೂಪದಲ್ಲಿ ಹಾಕಿದ್ದ ಉಪ್ಪಿನ ರಾಶಿಯನ್ನು ಇಲ್ಲಿನ ಬಾಡಾದ ಮಹಾದೇವ ದೇವಸ್ಥಾನದ ಸಮಿತಿಯ ಪದಾಧಿಕಾರಿಗಳುಬುಧವಾರ ತೆರವು ಮಾಡಿದರು.

ಈ ದೇವಸ್ಥಾನದ ಪಕ್ಕದಲ್ಲಿ ಉಪ್ಪಿನ ಪ್ಯಾಕೆಟ್‌ಗಳನ್ನುಹರಕೆಯ ರೂಪದಲ್ಲಿ ಇಡಲಾಗುತ್ತದೆ. ಕಾಲಕಾಲಕ್ಕೆ ಇದನ್ನು ತೆಗೆದು ಕಾಳಿ ಸಂಗಮದಲ್ಲಿ ಸಮಿತಿಯವರು ವಿಸರ್ಜಿಸುತ್ತಾರೆ. ಇದು ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ಧತಿ ಇದಾಗಿದೆ.

ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ದೀಪಕ್ ಕಳಸ, ‘ದೇವರಿಗೆ ಪೂಜೆ ಸಲ್ಲಿಸಿದ ಭಕ್ತರು ಉಪ್ಪನ್ನು ಅವರೇ ತೆಗೆದುಕೊಂಡು ಹೋಗಿ ಕಾಳಿ ನದಿ ಸಂಗಮದಲ್ಲಿ ಹಾಕಬೇಕು. ಇದರಿಂದ ಧಾರ್ಮಿಕ ಭಾವನೆಗೂ ಅಡ್ಡಿ ಆಗುವುದಿಲ್ಲ. ಸಮಿತಿಗೆ ರಾಶಿ ರಾಶಿ ಉಪ್ಪನ್ನು ತೆಗೆದುಕೊಂಡು ಹೋಗುವುದು ಕಷ್ಟವಾಗುತ್ತದೆ. ಜತೆಗೆ ಉಪ್ಪು ಹಾಕುವ ಸ್ಥಳದಲ್ಲಿ ವಿದ್ಯುತ್ ಪರಿವರ್ತಕವಿದೆ.ಇದಕ್ಕೆ ತೊಂದರೆ ಆಗುತ್ತದೆ. ಉಪ್ಪಿನ ಅಂಶ ಕಬ್ಬಿಣದ ವಸ್ತುಗಳಿಗೆ ತಾಗಿ ಬೇಗ ತುಕ್ಕು ಹಿಡಿಯುತ್ತಿದೆ’ ಎಂದು ಸಮಸ್ಯೆಯನ್ನು ವಿವರಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಮದನ ಗುನಗಿ, ನಗರಸಭಾ ಸದಸ್ಯ ಪ್ರೇಮಾನಂದ ಗುನಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT