ಬುಧವಾರ, ಅಕ್ಟೋಬರ್ 16, 2019
27 °C

ಗುಡ್ಡದಿಂದ ಬಿದ್ದು ಸಾಂಬಾರ ಜಿಂಕೆ ಸಾವು

Published:
Updated:
Prajavani

ಕಾರವಾರ: ತಾಲ್ಲೂಕಿನ ವೈಲವಾಡ ಗ್ರಾಮದ ಖಾರ್ಗಾದಲ್ಲಿ ಎತ್ತರದ ಗುಡ್ಡದಿಂದ ಬಿದ್ದ ಸಾಂಬಾರ ಜಿಂಕೆಯೊಂದು ಬುಧವಾರ ಮೃತಪಟ್ಟಿದೆ. 

ಅದಕ್ಕೆ ಸುಮಾರು ಒಂದು ವರ್ಷ ಪ್ರಾಯವಾಗಿತ್ತು. ಕಳೇಬರದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಂತ್ಯಕ್ರಿಯೆ ಮಾಡಲಾಗಿದೆ. ಹೆಚ್ಚಿನ ವಿವರಗಳಿಗೆ ತನಿಖೆ ನಡೆಸಲಾಗುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಡಿ.ಸಿ.ಎಫ್ ವಸಂತ ರೆಡ್ಡಿ, ಎ.ಸಿ.ಎಫ್ ವಸಂತ ನಾವಿ, ಆರ್.ಎಫ್.ಒ ಜಿ.ವಿ.ನಾಯ್ಕ ಮತ್ತು ಅವರ ತಂಡದ ಸದಸ್ಯರಿದ್ದರು.

Post Comments (+)