ಗ್ರಾಮ ವಿಕಾಸಕ್ಕೆ ಮಾದರಿ ‘ಹುಳಗೋಳ ಸೊಸೈಟಿ’

7
ಶತಮಾನೋತ್ಸವ ವರ್ಷಾಚರಣೆ

ಗ್ರಾಮ ವಿಕಾಸಕ್ಕೆ ಮಾದರಿ ‘ಹುಳಗೋಳ ಸೊಸೈಟಿ’

Published:
Updated:
ಶಿರಸಿ ತಾಲ್ಲೂಕಿನ ಹುಳಗೋಳ ಸೊಸೈಟಿ ಆವರಣದಲ್ಲಿ ಬೆಳೆಸಿರುವ ನರ್ಸರಿ

ಶಿರಸಿ: ತಾಲ್ಲೂಕಿನ ಭೈರುಂಬೆ ಸುತ್ತಲಿನ ಹಳ್ಳಿಗರ ಜೀವನಾಡಿಯಾಗಿರುವ ಹುಳಗೋಳ ಸೇವಾ ಸಹಕಾರಿ ಸಂಘವು ಸಾಮಾನ್ಯ ಹಳ್ಳಿಯೊಂದರಲ್ಲಿ ಸಕಲ ಸೌಲಭ್ಯಗಳನ್ನು ರೈತರಿಗೆ ನೀಡಿದೆ.

ಸೊಸೈಟಿಯಲ್ಲಿ ಕೃಷಿ, ತೋಟಗಾರಿಕಾ ಉತ್ಪನ್ನಗಳ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ರೈತರಿಗೆ ಅಗತ್ಯವಾಗಿ ಬೇಕಾಗುವ ಎಲ್ಲ ಸಲಕರಣೆ, ಗೊಬ್ಬರ, ಯಂತ್ರಗಳು ಇಲ್ಲಿ ಸಿಗುತ್ತವೆ. ತರಕಾರಿಯಲ್ಲಿ ಸ್ವಾವಲಂಬನೆ ಸಾಧಿಸುವ ಉದ್ದೇಶದಿಂದ ನರ್ಸರಿ ಸಸಿಗಳನ್ನು ಮಾಡಿ, ರೈತರಿಗೆ ಒದಗಿಸುವ ಕೆಲಸ ಸಂಘದಿಂದ ನಡೆಯುತ್ತಿದೆ. ಎಲ್ಲೆಡೆ ನಗದುರಹಿತ ವ್ಯವಹಾರವನ್ನು ಈಗ ಪ್ರೋತ್ಸಾಹಿಸುತ್ತಿದ್ದರೆ, ಈ ಸೊಸೈಟಿಯಲ್ಲಿ ಇದೇ ಮಾದರಿಯ ವ್ಯವಹಾರ 25 ವರ್ಷಗಳ ಹಿಂದಿನಿಂದಲೇ ಇದೆ.

ಅಗಸಾಲ ಬೊಮ್ಮನಳ್ಳಿ, ತಾರಗೋಡ, ಬೆಳಲೆ, ನಡಗೋಡ, ಗೋಳಿಕೊಪ್ಪ ಮೊದಲಾದ 10 ಗ್ರಾಮಗಳ ಸಮಗ್ರ ಗ್ರಾಮ ವಿಕಾಸದಲ್ಲಿ ಸಹಕಾರಿ ಸಂಘದ ಕೊಡುಗೆಯಿದೆ. ಸಂಘದ ಪದಾಧಿಕಾರಿಗಳು ಹಳ್ಳಿಗಳಿಗೆ ಭೇಟಿ ನೀಡಿ ಸಲಹೆ ನೀಡುತ್ತಾರೆ. ಉಳಿತಾಯ ಮಾಡಲು ರೈತರನ್ನು ಪ್ರೇರೇಪಿಸುತ್ತಾರೆ. ರೈತರನ್ನು ಸದಾ ಬೆಂಬಲಿಸುವ ಸೊಸೈಟಿಯಿಂದಾಗಿ ಈ ಭಾಗದಲ್ಲಿ ರೈತ ಆತ್ಮಹತ್ಯೆ ಪ್ರಕರಣಗಳು ಇಲ್ಲ ಎನ್ನುತ್ತಾರೆ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಎಂ.ಹೆಗಡೆ.

ಸಹಕಾರೀ ಕ್ಷೇತ್ರದ ಹಿರಿಯ ಗಜಾನನ ಎಂ. ಹೆಗಡೆ ಹುಳಗೋಳ ಅವರ ವಿಶೇಷ ಆಸಕ್ತಿಯಿಂದ 60 ವರ್ಷಗಳಿಂದ ಹುಳಗೋಳ ಸಂಘ ಮುನ್ನಡೆಯಲ್ಲಿ ಸಾಗಿದೆ. ಸಹಕಾರಿ ಸಂಘದಲ್ಲಿ ಒಟ್ಟು ಶೇರು ಮೊತ್ತ ₹ 50 ಲಕ್ಷ, ರೈತರ ಠೇವು ಒಟ್ಟು ₹ 34 ಕೋಟಿ ಇದೆ. ಕಟ್‌ ಬಾಕಿ ಪ್ರಮಾಣ ಶೇ 1ರಷ್ಟಿದೆ.

ಸಹಕಾರಿ ಸಂಘದ ರೈತ ಸದಸ್ಯರು ನಿಧನರಾದರೆ, ಸಂಘವು ತಕ್ಷಣ ₹ 10ಸಾವಿರ ಮೊತ್ತವನ್ನು ಅವರ ಕುಟುಂಬಕ್ಕೆ ನೀಡುತ್ತದೆ. ಬರಗಾಲ, ಅನಾವೃಷ್ಟಿಯಿಂದ ಬೆಳೆನಷ್ಟ, ಹಾನಿಗೆ ಒಳಗಾದರೆ ನೆರವಾಗಲು ಸಂಕಷ್ಟ ನಿಧಿ ಸ್ಥಾಪನೆ ಮಾಡಿದೆ. ಶತಮಾನೋತ್ಸವದ ಹೊಸ್ತಿಲಿನಲ್ಲಿರುವ ಸಂಘದ ವರ್ಷಾಚರಣೆಯ ಮೊದಲ ಕಾರ್ಯಕ್ರಮ ಜು.9ರಂದು ನಡೆಯಲಿದೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !