ಗುರುವಾರ , ಆಗಸ್ಟ್ 22, 2019
27 °C

ಕತ್ತರಿಸಿದ್ದ ಶ್ರೀಗಂಧದ ಕಟ್ಟಿಗೆ ಜಪ್ತಿ

Published:
Updated:
Prajavani

ಜೊಯಿಡಾ: ತಾಲ್ಲೂಕಿನ ನಾಗೋಡಾ ಸಮೀಪದ ಅರಣ್ಯದಲ್ಲಿ ಕತ್ತರಿಸಿ ಇಟ್ಟಿದ್ದ ಶ್ರೀಗಂಧದ ಕಟ್ಟಿಗೆಯನ್ನು ಅರಣ್ಯಾಧಿಕಾರಿಗಳು ಗುರುವಾರ ವಶಪಡಿಸಿಕೊಂಡಿದ್ದಾರೆ. 

ಸುಮಾರು ₹ 2 ಲಕ್ಷ ಮೌಲ್ಯದ ಗಂಧದ ಕಟ್ಟಿಗೆಯನ್ನು ಜಪ್ತಿ ಮಾಡಲಾಗಿದ್ದು, ಆರೋಪಿಗಳಿಗೆ ಹುಡುಕಾಟ ನಡೆಸಲಾಗಿದೆ. ನಾಗೋಡಾ ಅರಣ್ಯದಲ್ಲಿ ಎರಡು ಗಂಧದ ಮರಗಳನ್ನು ಬುಡದಿಂದ ಕತ್ತರಿಸಲಾಗಿತ್ತು. ಅಲ್ಲೇ ಒಣಗಲು ಬಿಟ್ಟು ಆರೋಪಿಗಳು ಸ್ಥಳದಿಂದ ತೆರಳಿದ್ದರು. ಈ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು 

ಜೊಯಿಡಾ ವಲಯ ಅರಣ್ಯಾಧಿಕಾರಿ ಮಹೀಮ್ ಜನ್ನು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Post Comments (+)