ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಕಾವ್‌’ನಿಂದ ವಿದ್ಯಾರ್ಥಿಗಳಿಗೆ 500 ಕಿಟ್ ಕೊಡುಗೆ

ಕಾರವಾರ ರೋಟರಿ ಕ್ಲಬ್‌ ಪ್ರಮುಖರೊಂದಿಗೆ ಕೆನಡಾದ ಪ್ರತಿನಿಧಿಗಳ ಉಸ್ತುವಾರಿ
Last Updated 18 ಫೆಬ್ರುವರಿ 2020, 12:56 IST
ಅಕ್ಷರ ಗಾತ್ರ

ಕಾರವಾರ:ಕೆನಡಾದ ‘ಸ್ಕಾವ್’ ಸಂಘಟನೆಯಿಂದ(SCAW: Sleeping Children Around The World) ತಾಲ್ಲೂಕಿನ 500ಬಡ ವಿದ್ಯಾರ್ಥಿಗಳಿಗೆ ಅಗತ್ಯ ವಸ್ತುಗಳ ಕಿಟ್‌ಗಳನ್ನು ನಗರದಲ್ಲಿ ಮಂಗಳವಾರ ವಿತರಿಸಲಾಯಿತು.ನಗರದ ರೋಟರಿ ಕ್ಲಬ್ ಗುರುತಿಸಿದ ವಿದ್ಯಾರ್ಥಿಗಳು ಒಟ್ಟು ₹ 22 ಲಕ್ಷ ಮೌಲ್ಯದಸಾಮಗ್ರಿಯನ್ನುಪಡೆದುಕೊಂಡರು.

‘ಸ್ಕಾವ್’ ಸಂಘಟನೆಯು ದೇಶದ ವಿವಿಧೆಡೆ ಬಡ ವಿದ್ಯಾರ್ಥಿಗಳಿಗೆ ಹಲವು ವರ್ಷಗಳಿಂದ ಕಿಟ್‌ಗಳನ್ನು ನೀಡುತ್ತಿದ್ದು, ಕಾರವಾರದಲ್ಲಿ ಇದು ಎರಡನೇ ವರ್ಷದ ಕಾರ್ಯಕ್ರಮವಾಗಿದೆ. ಈ ಯೋಜನೆಗಾಗಿ ರೋಟರಿ ಕ್ಲಬ್‌, ‘ಸ್ಕಾವ್’ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.ಸಂಘಟನೆಯ ಆರು ಮಂದಿ ಪ್ರತಿನಿಧಿಗಳುಕಿಟ್ ವಿತರಣೆಯ ಉಸ್ತುವಾರಿ ವಹಿಸಿದ್ದರು.

ಕಿಟ್‌ನಲ್ಲಿ ಏನೇನಿದೆ?: ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಪೂರಕವಾದ ಸಲಕರಣೆಗಳು ಈ ಕಿಟ್‌ನಲ್ಲಿವೆ. ಒಂದು ಕಂಬಳಿ, ಸೊಳ್ಳೆಪರದೆ, ಚಾಪೆ,ಚಾದರ (ಹೊದಿಕೆ), ಸ್ಕೂಲ್ ಬ್ಯಾಗ್, ಸ್ವೆಟರ್, ರೇನ್‌ಕೋಟ್, ನೋಟ್‌ಬುಕ್, ರೈಟಿಂಗ್ ಪ್ಯಾಡ್, ಕಂಪಾಸ್ ಬಾಕ್ಸ್, ಎರಡು ಜೊತೆ ಬಟ್ಟೆ, ಪಾದರಕ್ಷೆಗಳನ್ನು ಒಳಗೊಂಡಿದೆ.

‘ಈ ಯೋಜನೆಯನ್ನು ಜಾರಿ ಮಾಡುವಲ್ಲಿ ರೋಟರಿಕ್ಲಬ್‌, ಇನ್ನರ್ ವೀಲ್ ಮತ್ತುರೋಟರ‍್ಯಾಕ್ಟ್‌ ಪದಾಧಿಕಾರಿಗಳು ಹಾಗೂಸದಸ್ಯರ ಶ್ರಮ ಸಾಕಷ್ಟಿದೆ. ತಾಲ್ಲೂಕಿನ ಶಾಲೆಗಳ ಶಿಕ್ಷಕರನ್ನು ಸಂಪರ್ಕಿಸಿ ಅಲ್ಲಿರುವ ಅರ್ಹ, ಬಡ ವಿದ್ಯಾರ್ಥಿಗಳ ಪಟ್ಟಿ ಸಿದ್ಧಪಡಿಸಲಾಗುತ್ತದೆ. ನಂತರ ಅದನ್ನು ಸ್ಕಾವ್ ಸಂಸ್ಥೆಗೆ ಕಳುಹಿಸಿಕೊಟ್ಟು ಅಂತಿಮಗೊಳಿಸಲಾಗುತ್ತದೆ’ ಎಂದು ರೋಟರಿ ಕ್ಲಬ್‌ನ ಅಧ್ಯಕ್ಷ ನಾಗರಾಜ ಜೋಶಿ ತಿಳಿಸಿದರು.

ಈ ವರ್ಷದ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ನರೇಂದ್ರ ದೇಸಾಯಿ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಬೆಳಗಾವಿಯ ರೋಟರಿ ಕ್ಲಬ್ ಯೋಜನೆಗೆ ಸಂಚಾಲಕತ್ವದ ಜವಾಬ್ದಾರಿ ನೋಡಿಕೊಳ್ಳುತ್ತಿದೆ.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ಉಪಾಧ್ಯಕ್ಷ ಅರ್ಜುನ್, ನಿಕಟಪೂರ್ವ ಅಧ್ಯಕ್ಷ ಕೃಷ್ಣಾನಂದ ಬಾಂದೇಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT