4
ಪುರಲಕ್ಕಿಬೇಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಡೆಯಲ್ಲಿ ಇಳಿಯುವ ಮಳೆನೀರು

ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಪಾಠ!

Published:
Updated:
ಅಂಕೋಲಾ ತಾಲ್ಲೂಕಿನ ‍ಪುರಲಕ್ಕಿಬೇಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ತರಗತಿಯೊಂದರ ದೃಶ್ಯ.

ಅಂಕೋಲಾ: ತಾಲ್ಲೂಕಿನ ಪುರಲಕ್ಕಿಬೇಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಾವಣಿ ಸೋರುತ್ತಿದೆ. ತೇವಾಂಶದಿಂದಾಗಿ ಗೋಡೆಗಳಲ್ಲಿ ವಿದ್ಯುತ್ ಪ್ರವಹಿಸುತ್ತಿದೆ. ಇದರಿಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ನಾಲ್ಕು ವರ್ಷಗಳಿಂದ ಈ ಶಾಲೆಯ ಚಾವಣಿಯಲ್ಲಿ ಮಳೆ ನೀರು ಸೋರುತ್ತಿದೆ. ಗೋಡೆಗಳೂ ಒದ್ದೆಯಾಗಿವೆ. ಇದರಿಂದಾಗಿ ವಿದ್ಯುತ್ ಸ್ವಿಚ್ ಬಾಕ್ಸ್‌ನಿಂದ ಗೋಡೆಯಲ್ಲಿ ವಿದ್ಯುತ್ ಹರಿಯುತ್ತಿದೆ. ಕೆಲವೊಮ್ಮೆ ವಿದ್ಯುತ್ ಸಂಪರ್ಕ ಕಡಿತ ಮಾಡಿ ಪಾಠ ಮಾಡಲಾಗುತ್ತಿದೆ. 

ಈ ಶಾಲೆಯಲ್ಲಿ ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ 43 ವಿದ್ಯಾರ್ಥಿಗಳಿದ್ದಾರೆ. ಶೇ 90ರಷ್ಟು ವಿದ್ಯಾರ್ಥಿಗಳು ಪರಿಶಿಷ್ಟ ಜಾತಿಗೆ ಸೇರಿದವರು.  ಶಾಲಾ ಕೊಠಡಿಗಳ ದುರವಸ್ತೆ ಕುರಿತು ಮೇಲಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ತಿಳಿಸಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ಮಳೆ ಬಂದರೆ ತರಗತಿ ಕೊಠಡಿಯಲ್ಲಿ ನೀರು ತುಂಬುತ್ತದೆ. ಇದರಲ್ಲೇ ಮಕ್ಕಳಿಗೆ ಪಾಠ ಮಾಡುವ ಅನಿವಾರ್ಯತೆ ಉಂಟಾಗುತ್ತಿದೆ ಎಂದು ಶಿಕ್ಷಕರು ಅಳಲು ತೋಡಿಕೊಳ್ಳುತ್ತಾರೆ.

ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಹಾಗೂ ಮಕ್ಕಳಲ್ಲಿ ಸುರಕ್ಷತೆಯ ಭಾವನೆ ಮೂಡುವ ಸಲುವಾಗಿ ಕೂಡಲೇ ಈ ಶಾಲೆಯನ್ನು ದುರಸ್ತಿ ಮಾಡಿಸಲು ಶಿಕ್ಷಣ ಇಲಾಖೆ ಮುಂದಾಗಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ 
– ಮಂಜುನಾಥ ಇಟಗಿ

ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನ ಸೆಳೆಯಲಾಗಿದೆ. 6 ಮತ್ತು 7ನೇ ತರಗತಿಗಳ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದು, ಶೀಘ್ರವೇ ಸರಿಪಡಿಸಲು ಮನವಿ ಮಾಡಿಕೊಳ್ಳುತ್ತೇನೆ.
- ರಫೀಖ್ ಶೇಖ್, ಮುಖ್ಯ ಶಿಕ್ಷಕ

ಎಲ್ಲ ವಿದ್ಯಾರ್ಥಿಗಳ ಪೋಷಕರು ದಿನಗೂಲಿ ಮಾಡುವವರು. ಈ ಶಾಲೆಯ ಬಗ್ಗೆ ಗಮನ ಹರಿಸದೇ ಯಾರದೋ ಒತ್ತಡಕ್ಕೆ ಮಣಿದು ಬೇರೆ ಶಾಲೆಗಳ ದುರಸ್ತಿಗೆ ಹಣ ನೀಡಲಾಗುತ್ತಿದೆ. 
- ಪ್ರಭಾಕರ ಆಗೇರ, ಎಸ್‍ಡಿಎಂಸಿ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !