ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ದೇವಭಾಗದಲ್ಲಿ ಹೆಚ್ಚಿದ ಕಡಲ್ಕೊರೆತದ ಹಾವಳಿ

ಅಲೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಚಾಲನೆಯ ನಿರೀಕ್ಷೆ
Last Updated 21 ಜುಲೈ 2019, 13:21 IST
ಅಕ್ಷರ ಗಾತ್ರ

ಕಾರವಾರ: ನಿರಂತರ ಕಡಲ್ಕೊರೆತದ ಪರಿಣಾಮ ಇಲ್ಲಿನ ದೇವಭಾಗ ಕಡಲತೀರದಲ್ಲಿ ಭೂ ಪ್ರದೇಶ ಸಮುದ್ರ ಪಾಲಾಗುತ್ತಿದೆ.ಅರಬ್ಬಿ ಸಮುದ್ರದ ಬೃಹತ್ ಅಲೆಗಳು ದಡಕ್ಕೆ ಅಪ್ಪಳಿಸಿ ನೂರಾರು ಮರಗಳು, ಕಾಂಡ್ಲಾಸಸಿಗಳನ್ನು ಸೆಳೆಯುತ್ತಿವೆ. ಅಲೆ ತಡೆಗೋಡೆ ನಿರ್ಮಾಣಕ್ಕೆ ಹಣ ಬಿಡುಗಡೆಯಾಗದೇ ಕಾಮಗಾರಿಯೂ ವಿಳಂಬವಾಗಿದೆ.

ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಈ ಪ್ರದೇಶದ ಸೌಂದರ್ಯಕ್ಕೂ ಇದರಿಂದ ಕುಂದು ಉಂಟಾಗುತ್ತಿದೆ.ಸದಾಶಿವಗಡದ ಬಳಿ ಕಾಳಿ ನದಿಯು ಸಮುದ್ರ ಸೇರುವ ಜಾಗದಿಂದ ಸುಮಾರು ಒಂದುಕಿಲೋಮೀಟರ್ದೂರದವರೆಗೂ ಈ ಸಮಸ್ಯೆಯಿದೆ. ಸರ್ಕಾರಿ ಸ್ವಾಮ್ಯದ ಜಂಗಲ್ ಲಾಡ್ಜಸ್ ಮತ್ತುರೆಸಾರ್ಟ್‌ಗೆ (ಜೆಎಲ್‌ಆರ್) ಪ್ರತಿ ಮಳೆಗಾಲದಲ್ಲೂ ಅಲೆಗಳ ಆತಂಕ ಕಾಡುತ್ತದೆ. ಸಮೀಪದಲ್ಲಿ600 ಮೀಟರ್‌ಗಳಷ್ಟು ಉದ್ದದ ಅಲೆ ತಡೆಗೋಡೆಯನ್ನು ಈ ಹಿಂದೆಯೇ ನಿರ್ಮಾಣ ಮಾಡಲಾಗಿದೆ. ಇದರಬಂಡೆಗಳನ್ನೂ ಅಲೆಗಳು ಕೊಚ್ಚಿಕೊಂಡು ಹೋಗುತ್ತಿವೆ.

‘ಪ್ರತಿ ವರ್ಷ ಕಡಲ್ಕೊರೆತದಿಂದ ನಷ್ಟವಾಗುತ್ತಿದೆ. ವರ್ಷವೂ ಸರಾಸರಿಎರಡುಮೀಟ್‌ಗಳಷ್ಟು ಭೂಭಾಗ ಸಮುದ್ರ ಪಾಲಾಗುತ್ತಿದೆ. ಗಾಳಿಗಿಡಗಳ ನೆಡುತೋಪು ಹಾಳಾಗುತ್ತಿದೆ. ತಾತ್ಕಾಲಿಕವಾಗಿ ಚಿರೇಕಲ್ಲು ಬಳಸಿ ಸಮಸ್ಯೆ ನಿಯಂತ್ರಣ ಮಾಡುತ್ತಿದ್ದೇವೆ’ ಎನ್ನುತ್ತಾರೆ ಜೆಎಲ್‌ಆರ್ ವ್ಯವಸ್ಥಾಪಕಪಿ.ಆರ್.ನಾಯ್ಕ.

ದೇವಭಾಗದಲ್ಲಿ200 ಮೀಟರ್‌ಗಳಷ್ಟು ಉದ್ದದ ತಡೆಗೋಡೆ ನಿರ್ಮಾಣಮಾಡಲು ಜಿಲ್ಲಾಡಳಿತವುಪ್ರವಾಸೋದ್ಯಮ ಇಲಾಖೆಗೆ ಪ್ರಸ್ತಾವ ಸಲ್ಲಿಸಿತ್ತು. ಇದಕ್ಕೆ ₹ 2.5 ಕೋಟಿ ಅನುದಾನ ಮಂಜೂರು ಮಾಡುವುದಾಗಿ ಪ್ರವಾಸೋದ್ಯಮ ಇಲಾಖೆ ತಿಳಿಸಿತ್ತು. ಕಳೆದ ವರ್ಷ ಆಡಳಿತಾತ್ಮಕ ಅನುಮೋದನೆಯನ್ನೂ ನೀಡಲಾಗಿತ್ತು.ಆದರೆ, ಹಣ ಬಿಡುಗಡೆಯಾಗದೆ ಕೆಲಸ ಸಾಗುತ್ತಿಲ್ಲ.

‘ಯೋಜನೆಗೆ ಅಗತ್ಯ ಅಂದಾಜುಪಟ್ಟಿ ಸಿದ್ಧಪಡಿಸಿ ಈಗಾಗಲೇಇಲಾಖೆಗೆ ಸಲ್ಲಿಸಿದ್ದೇವೆ. ಆದರೆ, ಹಣ ಬಿಡುಗಡೆಯಾಗಿಲ್ಲ. ಅನುದಾನ ದೊರೆತ ನಂತರ ಟೆಂಡರ್ ಕರೆದು ಕಾಮಗಾರಿ ನಡೆಸಲಾಗುತ್ತದೆ’ ಎನ್ನುತ್ತಾರೆ ಬಂದರು ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ರಾಜಕುಮಾರ್ ಹೆಡೆ.

‘ಸದ್ಯವೇ ಹಣ ಹಸ್ತಾಂತರ’:‘ದೇವಭಾಗದಲ್ಲಿ ಕಡಲ್ಕೊರೆತ ಸಮಸ್ಯೆ ತಡೆಗಟ್ಟಲು ಪ್ರವಾಸೋದ್ಯಮ ಇಲಾಖೆಯಿಂದ ₹ 2.5ಕೋಟಿ ಮಂಜೂರಾಗಿದೆ. ಆದರೆ, ಈ ಹಿಂದೆತಾಂತ್ರಿಕ ಕಾರಣಗಳಿಂದ ಹಣ ಬಿಡುಗಡೆಗೆ ಅಡಚಣೆಯಾಗಿತ್ತು. ಮಾರ್ಚ್‍ನಲ್ಲಿ ಆಡಳಿತಾತ್ಮಕ ಅನುಮೋದನೆ ಸಿಕ್ಕಿದ್ದು, ಸದ್ಯದಲ್ಲಿಯೇ ಬಂದರು ಇಲಾಖೆಗೆ ಹಣ ಹಸ್ತಾಂತರವಾಗಲಿದೆ’ ಎಂದುಪ್ರವಾಸೋದ್ಯಮ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಎಸ್.ಪುರುಷೋತ್ತಮ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT