ಅಲ್ಲಲ್ಲಿ ಬಣ್ಣ ಬದಲಿಸಿದ ಸಮುದ್ರದ ನೀರು

ಶನಿವಾರ, ಜೂಲೈ 20, 2019
25 °C

ಅಲ್ಲಲ್ಲಿ ಬಣ್ಣ ಬದಲಿಸಿದ ಸಮುದ್ರದ ನೀರು

Published:
Updated:
Prajavani

ಕಾರವಾರ: ಒಂದು ವಾರದಿಂದ ಬೀಸುತ್ತಿರುವ ಚಂಡಮಾರುತದ ಪ್ರಭಾವದಿಂದ ಅರಬ್ಬಿ ಸಮುದ್ರದ ಅಲ್ಲಲ್ಲಿ ನೀರಿನ ಬಣ್ಣ ತಿಳಿ ಹಸಿರಿಗೆ ತಿರುಗಿದೆ. ಆಳ ಸಮುದ್ರದಲ್ಲಿರುವ ಆಲ್ಗೆಗಳು (ಸಮುದ್ರ ಪಾಚಿ) ಕದಡಿರುವ ಕಾರಣ ಹೀಗಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. 

ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಸೋಮವಾರ ಇದು ಹೆಚ್ಚಾಗಿ ಕಂಡುಬಂತು. ಬೃಹತ್ ಅಲೆಗಳು ದಡಕ್ಕೆ ಧಾವಿಸುತ್ತಿದ್ದರೆ ತಿಳಿ ಹಸಿರು ಬಣ್ಣದ ನೀರು ಹಿನ್ನೆಲೆಯಲ್ಲಿ ಕಾಣುತ್ತಿತ್ತು. ಕೆಲವು ನಿಮಿಷ ಬಿಟ್ಟು ನೋಡಿದರೆ ಮತ್ತೊಂದೆಡೆ ಅದೇ ರೀತಿ ಕಂಡುಬರುತ್ತಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿದ ಕಾರವಾರದ ಕಡಲ ಜೀವವಿಜ್ಞಾನ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಶಿವಕುಮಾರ ಹರಗಿ, ‘ಈ ರೀತಿಯ ವಿದ್ಯಮಾನ ಆಲ್ಗೆಗಳಿಂದ ಕಂಡುಬರುತ್ತದೆ. ಸಮುದ್ರ ತೀರದಿಂದ ಸುಮಾರು 30 ನಾಟಿಕಲ್ ಮೈಲು ದೂರದಲ್ಲಿ ಆಲ್ಗೆಗಳು ದೊಡ್ಡ ಪ್ರಮಾಣದಲ್ಲಿವೆ. ಕಳೆದ ವರ್ಷ ಮಳೆಗಾಲದಲ್ಲಿ ಸಮುದ್ರದ ನೀರಿನ ಬಣ್ಣ ಹೆಚ್ಚಿನ ಪ್ರಮಾಣದಲ್ಲಿ ಬದಲಾಗಿತ್ತು. ನಂತರ ಅದು ನಿರಂತರವಾಗಿದೆ. ಈ ವರ್ಷವೂ ಕಾಣಿಸಿಕೊಳ್ಳುತ್ತಿದೆ’ ಎಂದು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !