ಶನಿವಾರ, ಅಕ್ಟೋಬರ್ 19, 2019
28 °C

ರಕ್ಷಣಾ ಇಲಾಖೆಯ ಹಣಕಾಸುಕಾರ್ಯದರ್ಶಿ ಸೀಬರ್ಡ್‌ಗೆ ಭೇಟಿ

Published:
Updated:
Prajavani

ಕಾರವಾರ: ರಕ್ಷಣಾ ಇಲಾಖೆ ಹಣಕಾಸು ಕಾರ್ಯದರ್ಶಿ ಗಾರ್ಗಿ ಕೌಲ್, ಇಲ್ಲಿನ ಸೀಬರ್ಡ್ ನೌಕಾನೆಲೆಗೆ ಗುರುವಾರ ಮತ್ತು ಶುಕ್ರವಾರ ಭೇಟಿ ನೀಡಿದರು. ಭೇಟಿಯ ಭಾಗವಾಗಿ ಅವರು ನೌಕಾನೆಲೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ಹೆಲಿಕಾಪ್ಟರ್‌ನಲ್ಲಿ ಕುಳಿತು ವೀಕ್ಷಿಸಿದರು.

ಕಾಳಿ ನದಿ, ಅಮದಳ್ಳಿ ಗ್ರಾಮ, ಗಂಗಾಗಳಿ ನದಿ ಹಾಗೂ ಕಿರು ಜಲಾಶಯದ ಪ್ರದೇಶವನ್ನು ಅವರು ಪರಿಶೀಲಿಸಿದರು. ಬಳಿಕ ಐಎನ್ಎಸ್ ಕದಂಬ ಹೆಲಿಪ್ಯಾಡ್‌ನಲ್ಲಿ ಅವರನ್ನು ಫ್ಲ್ಯಾಗ್ ಆಫೀಸರ್ ರಿಯರ್ ಅಡ್ಮಿರಲ್ ಮಹೇಶ್ ಸಿಂಗ್ ಬರಮಾಡಿಕೊಂಡರು. ಇದೇ ವೇಳೆ, ನೌಕಾನೆಲೆಯಲ್ಲಿ ನಡೆಯುತ್ತಿರುವ ಎರಡನೇ ಹಂತದ (2–ಎ) ಅಭಿವೃದ್ಧಿ ಕಾಮಗಾರಿಗಳ ಪ್ರದೇಶಗಳಿಗೂ ಭೇಟಿ ನೀಡಿ, ಅವುಗಳ ಪ್ರಗತಿ ಪರಿಶೀಲನೆ ಮಾಡಿದರು.

Post Comments (+)