ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ, ಟ್ರಂಪ್‌ ಜೊತೆ ಸೆಲ್ಫಿ ತೆಗೆಸಿಕೊಂಡಿದ್ದು ಶಿರಸಿಯ ಬಾಲಕ

Last Updated 23 ಸೆಪ್ಟೆಂಬರ್ 2019, 16:48 IST
ಅಕ್ಷರ ಗಾತ್ರ

ಸಿದ್ದಾಪುರ: ಅಮೆರಿಕದಲ್ಲಿ ಭಾನುವಾರ ನಡೆದ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಮೋದಿ ಹಾಗೂ ಟ್ರಂಪ್ ಅವರೊಂದಿಗೆ ಬಾಲಕನೊಬ್ಬ ಸೆಲ್ಫಿ ತೆಗೆದುಕೊಂಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದುಮಾಡಿದೆ.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಒಂಬತ್ತನೇ ತರಗತಿಯ ಸಾತ್ವಿಕ್ ಹೆಗಡೆ ಸೂರ್ಯ ನಮಸ್ಕಾರ ಪ್ರದರ್ಶನ ನೀಡಿದ್ದ. ಶಿರಸಿ ತಾಲ್ಲೂಕಿನ ತೊಳಗಾರಗದ್ದೆ ಪ್ರಭಾಕರ ಹೆಗಡೆ ಮತ್ತು ಸಿದ್ದಾಪುರ ತಾಲ್ಲೂಕು ಕರ್ಕಿಸವಲಿನ ಮೇಧಾ ಹೆಗಡೆ ದಂಪತಿ ಪುತ್ರ ಸಾತ್ವಿಕ್, ಪ್ರಸ್ತುತ ಅಮೆರಿಕ ನಿವಾಸಿ. ಆತನ ಅಪ್ಪ– ಅಮ್ಮ 17 ವರ್ಷಗಳಿಂದ ಟೆಕ್ಸಾಸ್‌ನಲ್ಲಿ ನೆಲೆಸಿದ್ದಾರೆ.

‘ಸಾತ್ವಿಕ್‌ನಿಗೆ ಯೋಗ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಪಾರ ಆಸಕ್ತಿ. ಮೋದಿ ಇದ್ದ ಅಂತರರಾಷ್ಟ್ರೀಯ ಕಾರ್ಯಕ್ರಮದಲ್ಲಿ ಸಾತ್ವಿಕ್ ಭಾಗಿಯಾಗಿದ್ದು, ನಮಗೆಲ್ಲ ಅತ್ಯಂತ ಖುಷಿ ತಂದಿದೆ’ ಎಂದು ಆತನ ಅಜ್ಜ, ಕರ್ಕಿಸವಲಿನ ಎಂ.ಆರ್.ಹೆಗಡೆ ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT