ಬುಧವಾರ, ಜುಲೈ 28, 2021
29 °C
900ರ ಗಡಿ ದಾಟಿದ ಸಂಖ್ಯೆ: ಸೋಂಕಿನ ಮೂಲ ಪತ್ತೆಯಾಗದ ಪ್ರಕರಣಗಳು ಅಧಿಕ

ಉತ್ತರ ಕನ್ನಡ | 76 ಜನರಿಗೆ ಕೋವಿಡ್ ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಜಿಲ್ಲೆಯ 76 ಮಂದಿಗೆ ಕೋವಿಡ್ ಖಚಿತವಾಗಿರುವುದನ್ನು ಆರೋಗ್ಯ ಇಲಾಖೆಯ ಶುಕ್ರವಾರದ ಬುಲೆಟಿನ್ ದೃಢಪಡಿಸಿದೆ. ಈ ಪೈಕಿ ಕುಮಟಾ ತಾಲ್ಲೂಕಿನಲ್ಲಿ 22 ಹಾಗೂ ಹೊನ್ನಾವರ ತಾಲ್ಲೂಕಿನಲ್ಲಿ 19 ಪ್ರಕರಣಗಳು ಸೇರಿವೆ. 

ಭಟ್ಕಳ ತಾಲ್ಲೂಕಿನಲ್ಲಿ ಒಂಬತ್ತು, ಹಳಿಯಾಳ ತಾಲ್ಲೂಕಿನಲ್ಲಿ ಆರು, ಶಿರಸಿ ಮತ್ತು ಕಾರವಾರ ತಾಲ್ಲೂಕುಗಳಲ್ಲಿ ತಲಾ ಐವರು, ಅಂಕೋಲಾ ಹಾಗೂ ಮುಂಡಗೋಡ ತಾಲ್ಲೂಕುಗಳಲ್ಲಿ ತಲಾ ನಾಲ್ವರು, ಸಿದ್ದಾಪುರ ಮತ್ತು ಯಲ್ಲಾಪುರ ತಾಲ್ಲೂಕುಗಳಲ್ಲಿ ತಲಾ ಒಬ್ಬರು ಸೋಂಕಿತರಾಗಿದ್ದಾರೆ.

ಶುಕ್ರವಾರದ ಬುಲೆಟಿನ್ ಪ್ರಕಾರ ಒಟ್ಟು 45 ಮಂದಿಗೆ ಸೋಂಕಿನ ಮೂಲ ಪತ್ತೆಯಾಗಿಲ್ಲ. ಈ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. 13 ಮಂದಿಗೆ ಈಗಾಗಲೇ ಸೋಂಕಿತರಾಗಿರುವವರ ಮೂಲಕ ಕೋವಿಡ್ ತಗುಲಿರುವ ಸಾಧ್ಯತೆಯಿದೆ. 13 ಮಂದಿ ಬೇರೆ ರಾಜ್ಯಗಳು, ನಗರಗಳಿಂದ ಜಿಲ್ಲೆಗೆ ವಾಪಸಾದವರು. ಮೂವರು ವಿದೇಶಗಳಿಂದ ಮರಳಿ ಬಂದವರಾಗಿದ್ದಾರೆ. ಇಬ್ಬರಿಗೆ ಐ.ಎಲ್.ಐ (ಜ್ವರದ ಲಕ್ಷಣ) ಇರುವುದೂ ಆರೋಗ್ಯ ತಪಾಸಣೆಯ ವೇಳೆ ಗೊತ್ತಾಗಿದೆ.‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು