‘ಅದ್ವೈತ ತತ್ವ ಸಾರ ಜನರಿಗೆ ತಲುಪಲಿ’

ಶನಿವಾರ, ಮೇ 25, 2019
28 °C

‘ಅದ್ವೈತ ತತ್ವ ಸಾರ ಜನರಿಗೆ ತಲುಪಲಿ’

Published:
Updated:
Prajavani

ಕಾರವಾರ: ಶಂಕರಾಚಾರ್ಯರು ಜಗತ್ತಿನ ಶ್ರೇಷ್ಠ ತತ್ವಜ್ಞಾನಿಗಳು. ಅವರ ಅದ್ವೈತ ತತ್ವದ ಸಾರವನ್ನು ಜನರಿಗೆ ತಲುಪಿಸುವ ಅಗತ್ಯವಿದೆ ಎಂದು ಶಿವಾಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಶಿವಾನಂದ ನಾಯಕ ಹೇಳಿದರು.

ಅವರು ನಗರದ ಶಂಕರಮಠದಲ್ಲಿ ಬುಧವಾರ ಆಯೋಜಿಸಲಾದ 14ನೇ ವರ್ಷದ ಶಂಕರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

‘ನಮ್ಮ ಪಠ್ಯಪುಸ್ತಕಗಳಲ್ಲಿ ಶ್ರೀ ಶಂಕರರ ‘ಬ್ರಹ್ಮಸತ್ಯಂ ಜಗನ್ಮಿಥ್ಯಾ’ ಎಂಬ ವಾಕ್ಯವಿದೆ. ಆದರೆ, ಅದರ ವಿವರಣೆಯಿಲ್ಲ. ಜಗತ್ತು ಮಿಥ್ಯೆ ಎಂಬ ಮಾಹಿತಿ ಜನಸಾಮಾನ್ಯರಿಗೂ ಅರ್ಥವಾಗುವ ಹಾಗೆ ಪುಸ್ತಕಗಳಲ್ಲಿ ಮೂಡಿಬರಬೇಕು. ಮಹಾನ್ ದಾರ್ಶನಿಕರ ವಿಚಾರಧಾರೆಗಳನ್ನು ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಅರಿಯುವಂತಾಗಬೇಕು’ ಎಂದು ಅಭಿಪ್ರಾಯಪಟ್ಟರು. 

ಜಾಂಬಾದ ಶಾರದಾಶ್ರಮದ ಸ್ವಾಮಿ ಪರಮಾತ್ಮಾನಂದಜೀ ಮಾತನಾಡಿದರು. ಶಾರದಾ ಮಹಿಳಾ ಮಂಡಲದ ಸದಸ್ಯೆಯರು ಪ್ರಾರ್ಥನಾ ಗೀತೆ ಹಾಡಿದರು. ಉತ್ಸವ ಸಮಿತಿ ಅಧ್ಯಕ್ಷ ಡಾ.ವೆಂಕಟೇಶ್ ಗಿರಿ ಸ್ವಾಗತಿಸಿದರು. ಮಠದ ಅಧ್ಯಕ್ಷ ಶಿವಾನಂದ ತೋಡೂರ್ಕರ್, ಕಾರ್ಯದರ್ಶಿ ವಿಶ್ವಂಭರ ಶೆಟ್ಟಿ, ಕೋಶಾಧ್ಯಕ್ಷ ಗಂಗಾಧರ ಶೆಟ್ಟಿ ಇದ್ದರು. 

ಸಭೆಯ ಬಳಿಕ ಶ್ಯಾಮಲಾ ಭಟ್ ಮತ್ತು ನಂದನ ಹೆಗಡೆ ತಂಡದವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನೆರವೇರಿತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !