ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ ಜಿಲ್ಲೆ ಪ್ರವೇಶಿಸುವವರಿಗೆ ಕ್ವಾರಂಟೈನ್ ಕಡ್ಡಾಯ: ಶಿವರಾಮ ಹೆಬ್ಬಾರ್

ಜಿಲ್ಲಾ ಉಸ್ತುವಾರಿ ಸಚಿವ ಹೇಳಿಕೆ
Last Updated 14 ಏಪ್ರಿಲ್ 2020, 14:55 IST
ಅಕ್ಷರ ಗಾತ್ರ

ಸಿದ್ದಾಪುರ: ಇನ್ನು ಮುಂದೆ ಜಿಲ್ಲೆಗೆ ಹೊರಗಿನಿಂದ ಯಾರೇ ಬಂದರೂ ಅವರನ್ನು ಪ್ರತ್ಯೇಕವಾಗಿ (ಕ್ವಾರೆಂಟೈನ್‌ನಲ್ಲಿ) ಇಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದರು.

ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕ್ವಾರೆಂಟನ್ ನಿಯಮವನ್ನು ಬಿಗಿಗೊಳಿಸಲಾಗುತ್ತದೆ. ಮನೆ ಕ್ವಾರಂಟೈನ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಿದ್ದೇವೆ’ ಎಂದರು.

‘ಗೋವಾದಲ್ಲಿ ನಮ್ಮ ಜಿಲ್ಲೆಯ ಕಾರ್ಮಿಕರಿದ್ದಾರೆ. ಅವರ ಕಷ್ಟ ನಮಗೆ ಗೊತ್ತಿದೆ. ಅಲ್ಲಿಂದ ಬರಲು ಅವರಿಗೆ ಬಾಗಿಲು ತೆಗೆದಲ್ಲಿ, ಉಳಿದ ರಾಜ್ಯಗಳಿಂದ ಬರುವವರಿಗೂ ಅವಕಾಶ ನೀಡಬೇಕಾಗುತ್ತದೆ. ಇದು ಸಮಸ್ಯೆಯನ್ನು ಸೃಷ್ಟಿ ಮಾಡುತ್ತದೆ. ಆದ್ದರಿಂದ ಗೋವಾಕ್ಕೆ ತಂಡವೊಂದನ್ನು ಕಳುಹಿಸಿ, ಆ ತಂಡದ ವರದಿಯನ್ನಾಧರಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು’ ಎಂದರು.

‘ಜಿಲ್ಲೆಯಲ್ಲಿ ಕೃಷಿ ಮತ್ತು ಮೀನುಗಾರಿಕೆ ನಡೆಸಲು ಅವಕಾಶ ನೀಡಿದ್ದೇವೆ. ಕೃಷಿಕರು ಗದ್ದೆ ಅಥವಾ ತೋಟದಲ್ಲಿ ಕೆಲಸ ಮಾಡಲು ತೊಂದರೆ ಇಲ್ಲ. ಕೃಷಿಗೆ ಸಂಬಂಧಿಸಿದ ವಸ್ತುಗಳ ಸಾಗಾಟವನ್ನೂ ಮಾಡಬಹುದು. ಆದರೆ ಅಂತರ ಕಾಯ್ದುಕೊಳ್ಳುವುದು ಅತ್ಯಗತ್ಯ’ ಎಂದರು.

‘ತಾಲ್ಲೂಕಿನ ಪಶು ಸಂಗೋಪನೆ ಇಲಾಖೆಗೆ ಬೇಕಾದ ಮಂಗನ ಕಾಯಿಲೆಯ ಉಣುಗುಗಳನ್ನು ಹೋಗಲಾಡಿಸುವ ಔಷಧ(ಇಂಜೆಕ್ಷನ್)ಕ್ಕೆ ಅಗತ್ಯ ಅನುದಾನವನ್ನು ಜಿಲ್ಲಾಡಳಿತದಿಂದ ದೊರೆಯುವಂತೆ ವ್ಯವಸ್ಥೆ ಮಾಡಲಾಗುತ್ತದೆ. ಮಂಗನ ಕಾಯಿಲೆ ಕಾರಣದಿಂದ ಇಲ್ಲಿನ ಆರೋಗ್ಯ ಇಲಾಖೆಗೆ ಅಗತ್ಯವಾದ ಸಿಬ್ಬಂದಿಯನ್ನು ಹಾಕಲು ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚನೆ ನೀಡಿದ್ದೇನೆ. ಇಲ್ಲಿನ ಆರೋಗ್ಯ ಇಲಾಖೆಗೆ ವೆಂಟಿಲೇಟರ್ ಇರುವ ಆಂಬ್ಯುಲೆನ್ಸ್ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದರು.

‘ಶಿವಮೊಗ್ಗ ಜಿಲ್ಲೆಯ ಕೆಎಫ್‌ಡಿ ರೋಗಿಗಳಿಗೆ ಮಣಿಪಾಲ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದ್ದರೇ ಅದೇ ನಿಯಮದಡಿ ನಮ್ಮ ಜಿಲ್ಲೆಯ ರೋಗಿಗಳಿಗೂ ಉಚಿತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಕ್ರಮಕೈಗೊಳ್ಳಲಾಗುವುದು’ ಎಂದು ಅವರು ಭರವಸೆ ನೀಡಿದರು.

‘ ರಾಜ್ಯದಲ್ಲಿ ಯಾರೂ ಹಸಿವಿನಿಂದ ಸಾಯಬಾರದು ಎಂಬ ದೃಷ್ಟಿಯಿಂದ ಅಂಗನವಾಡಿಗಳಿಗೆ ಆಹಾರ ಧಾನ್ಯ ನೀಡಿದ್ದೇವೆ. ಈಗ 39 ಸಾವಿರ ಜನರು ಈ ವ್ಯವಸ್ಥೆಯಡಿ ಊಟ ಮಾಡುತ್ತಿದ್ದಾರೆ’ ಎಂದರು. ಪಟ್ಟಣ ಪಂಚಾಯ್ತಿ ಸದಸ್ಯ ಕೆ.ಜಿ.ನಾಯ್ಕ, ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ, ತಹಶೀಲ್ದಾರ್ ಮಂಜುಳಾ ಭಜಂತ್ರಿ, ಡಿಎಸ್‌ಪಿ ಜಿ.ಟಿ.ನಾಯಕ, ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT