ಮಂಗಳವಾರ, ಜುಲೈ 27, 2021
21 °C

ಉತ್ತರ ಕನ್ನಡ ಜಿಲ್ಲೆಯಲ್ಲಿ ಆರು ಮಂದಿಗೆ ಕೋವಿಡ್ ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಜಿಲ್ಲೆಯಲ್ಲಿ ಮಂಗಳವಾರ ಆರು ಮಂದಿಗೆ ಕೋವಿಡ್ 19 ದೃಢಪಟ್ಟಿದೆ. ಈ ಪೈಕಿ ಯಲ್ಲಾಪುರದಲ್ಲಿ ಮೂವರಿಗೆ, ಭಟ್ಕಳ, ಮುಂಡಗೋಡ ಹಾಗೂ ಹೊನ್ನಾವರದಲ್ಲಿ ತಲಾ ಒಬ್ಬರಿಗೆ ಸೋಂಕು ಖಚಿತವಾಗಿದೆ.

ದೆಹಲಿಯಿಂದ ವಾಪಸಾದ ಮುಂಡಗೋಡದ 30 ವರ್ಷದ ಯುವಕನನ್ನು ಹೊರತುಪಡಿಸಿ ಉಳಿದ ಐದೂ ಮಂದಿ ಮುಂಬೈನಿಂದಲೇ ವಾಪಸಾದವರು. ಎಲ್ಲರೂ ಸಾಂಸ್ಥಿಕ ಕ್ವಾರಂಟೈನ್‌ನಲ್ಲೇ ಇದ್ದರು.

ಯಲ್ಲಾಪುರದ 49 ವರ್ಷದ ಮಹಿಳೆಯು ಸೋಂಕಿತರೊಬ್ಬರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರು. ಇಬ್ಬರೂ ಮುಂಬೈನಿಂದಲೇ ಬಂದಿದ್ದರು. ಉಳಿದಂತೆ, ಯಲ್ಲಾಪುರದ 33 ವರ್ಷದ ಯುವಕ, 46 ವರ್ಷದ ವ್ಯಕ್ತಿಗೆ ಸೋಂಕು ಖಚಿತವಾಗಿದೆ. ಭಟ್ಕಳದ 43 ವರ್ಷದ ವ್ಯಕ್ತಿ ಹಾಗೂ ಹೊನ್ನಾವರದ 36 ವರ್ಷದ ವ್ಯಕ್ತಿಗೂ ಕೋವಿಡ್ 19 ದೃಢಪಟ್ಟಿದೆ.

ಜಿಲ್ಲೆಯಲ್ಲಿ ಮಂಗಳವಾರದವರೆಗೆ ಒಟ್ಟು 120 ಮಂದಿಗೆ ಸೋಂಕು ದೃಢಪಟ್ಟಿದ್ದು, 93 ಮಂದಿ ಗುಣಮುಖರಾಗಿದ್ದಾರೆ. 27 ಮಂದಿ ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕೋವಿಡ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.