ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಗಿಟ್ಟಿಸಲು ಕೌಶಲ ಅತ್ಯಗತ್ಯ

ಕೌಶಲ ತರಬೇತಿ, ಉದ್ಯೋಗಮೇಳ ಉದ್ಘಾಟಿಸಿದ ಸಚಿವ ಅನಂತಕುಮಾರ ಹೆಗಡೆ
Last Updated 19 ಜನವರಿ 2019, 13:11 IST
ಅಕ್ಷರ ಗಾತ್ರ

ಕಾರವಾರ: ‘ನಾವು ಪಡೆಯುವ ಪದವಿಗಳು ಕೇವಲ ಪ್ರಮಾಣಪತ್ರ ನೀಡುತ್ತವೆ. ಆದರೆ,ಉದ್ಯೋಗಗಿಟ್ಟಿಸಿಕೊಳ್ಳಲು ಕೌಶಲ ಬೇಕು. ಅದಿಲ್ಲದಿದ್ದರೆ ಬದಲಾಗುತ್ತಿರುವ ಜಗತ್ತಿನಲ್ಲಿ ಪಡೆದುಕೊಂಡ ಪದವಿಯಿಂದಲೂ ಏನೂ ಮಾಡಲು ಸಾಧ್ಯವಿಲ್ಲ’ ಎಂದು ಕೇಂದ್ರ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಖಾತೆ ಸಚಿವ ಅನಂತಕುಮಾರ ಹೆಗಡೆ ಅಭಿಪ್ರಾಯಪಟ್ಟರು.

ನಗರದಲ್ಲಿ ಆಯೋಜಿಸಲಾಗಿರುವ ಕೌಶಲ ತರಬೇತಿ ಮತ್ತು ಉದ್ಯೋಗಮೇಳವನ್ನುಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಈಚಿನ ದಿನಗಳಲ್ಲಿ ನಮ್ಮ ತರಗತಿಯ ಕಲಿಕೆಗೂ ಮಾಡುವ ಕೆಲಸಕ್ಕೂ ಸಂಬಂಧವಿಲ್ಲ. ನೌಕರಿಗೆ ಅಗತ್ಯವಾದ ಕೌಶಲಾಭಿವೃದ್ಧಿಗೆ ತರಬೇತಿ ನೀಡಬೇಕು. ಇಷ್ಟು ವರ್ಷ ಆಡಳಿತ ನಡೆಸಿದ್ದ ಸರ್ಕಾರ ಅದನ್ನು ಯೋಚನೆ ಮಾಡಿರಲಿಲ್ಲ. ಸಮಸ್ಯೆಗಳ ಆಳ, ಅಗಲ ಗೊತ್ತಿದ್ದವರು ಪೂರಕ ಕೆಲಸಗಳನ್ನು ಮಾಡುತ್ತಾರೆ’ ಎಂದು ಟೀಕಿಸಿದರು.

‘ಒಳ್ಳೆಯ ಸಂಸ್ಥೆಗಳಲ್ಲಿ ಕೆಲಸ ಪಡೆಯಲು ಇಂಗ್ಲಿಷ್ ಚೆನ್ನಾಗಿ ಗೊತ್ತಿರಬೇಕು ಎಂಬುದು ದೊಡ್ಡ ಭ್ರಮೆ. ನಮ್ಮಸರ್ಕಾರವು 47 ದೇಶಗಳ ಜತೆ ಒಪ್ಪಂದ ಮಾಡಿಕೊಂಡಿದೆ. ಅವುಗಳಲ್ಲಿ ಇಂಗ್ಲಿಷ್‌ ಮಾತನಾಡದ ಹಲವು ದೇಶಗಳಿವೆ. ಅಲ್ಲಿಗೆ ಕೌಶಲಯುತ ಅಭ್ಯರ್ಥಿಗಳನ್ನು ನಾವು ಪೂರೈಸಬೇಕಿದೆ’ ಎಂದು ತಿಳಿಸಿದರು.

ಗೋವಾ ವಿಧಾನಸಭಾಧ್ಯಕ್ಷ ಪ್ರಮೋದ್ ಸಾವಂತ್ ಮಾತನಾಡಿ, ‘ಅಭ್ಯರ್ಥಿಗಳು ವಿದ್ಯಾಭ್ಯಾಸದ ಜತೆಗೇ ತಮಗಿರುವ ಕೌಶಲದ ಬಗ್ಗೆ ಗಮನಹರಿಸಬೇಕು. ಯಾವುದೋ ಒಂದು ಪದವಿ ಪಡೆಯುವ ಬದಲು ಕೆಲಸ ಸಿಗುವಂಥ ಪದವಿ ಪಡೆಯಿರಿ. ನವಭಾರತ ನಿರ್ಮಾಣದಲ್ಲಿ ತಮ್ಮ ಸ್ಥಾನ ಎಲ್ಲಿರಬೇಕು ಎಂದು ನಿರ್ಧರಿಸಿ. ಎಲ್ಲರಿಗೂ ಕೆಲಸ ಸಿಗದಿದ್ದರೆ ಸ್ವಂತ ಉದ್ಯೋಗ ಶುರು ಮಾಡಬಹುದು’ ಎಂದು ಸಲಹೆ ನೀಡಿದರು.

‘ಮಹಿಳೆಯರ ಹಾಸ್ಟೆಲ್‌ಗೆ ಚಿಂತನೆ’:ಕರ್ನಾಟಕದ ಗಡಿ ಭಾಗದ ಜಿಲ್ಲೆಗಳಿಂದ ದಿನವೂ ಸಾವಿರಾರು ಯುವಕರು ಉದ್ಯೋಗಕ್ಕಾಗಿ ಗೋವಾಕ್ಕೆಬರುತ್ತಾರೆ.ಅವರಲ್ಲಿ ಮಹಿಳೆಯರ ಅನುಕೂಲಕ್ಕಾಗಿ ರಾಜ್ಯದ ಪ್ರಮುಖ ನಗರಗಳಲ್ಲಿ ಹಾಸ್ಟೆಲ್ ನಿರ್ಮಾಣಕ್ಕೆ ಚಿಂತಿಸಲಾಗುವುದು ಎಂದುಗೋವಾ ವಿಧಾನಸಭಾಧ್ಯಕ್ಷ ಪ್ರಮೋದ್ ಸಾವಂತ್ ಸಲಹೆ ನೀಡಿದರು.

‘ನಮ್ಮ ರಾಜ್ಯದ ಪ್ರವಾಸೋದ್ಯಮದಲ್ಲಿ ಉತ್ತರಕನ್ನಡದ ಅದೆಷ್ಟೋ ಮಂದಿನೌಕರಿ ಮಾಡುತ್ತಾರೆ. ಆದರೆ, ಕೌಶಲದ ಕೊರತೆಯಿಂದ ಒಂದೋ ತಾತ್ಕಾಲಿಕ ಕೆಲಸ ಪಡೆಯುತ್ತಾರೆ ಅಥವಾ ಕನಿಷ್ಟ ವೇತನಕ್ಕೆ ದುಡಿಯುತ್ತಾರೆ. ಅವರಿಗೆ ಕೌಶಲಾಭಿವೃದ್ಧಿ ತರಬೇತಿ ನೀಡಿದರೆ ಅನುಕೂಲವಾಗಬಹುದು’ ಎಂದುತಿಳಿಸಿದರು.

ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮಾತನಾಡಿ, ‘ಪಡೆಯಲು ಬಯಸುವ ವೃತ್ತಿಯ ಬಗ್ಗೆ ತಾಜಾ ಮಾಹಿತಿ ಹೊಂದಿರುವುದು ಮುಖ್ಯ. ಅಲ್ಲದೇ ಹುಟ್ಟೂರನ್ನು ಬಿಟ್ಟು ಬೇರೆ ಕಡೆಯೂ ಕೆಲಸ ಮಾಡಲು ಸಿದ್ಧರಾಗಬೇಕು. ಆಗ ಅವಕಾಶಗಳು ಹೆಚ್ಚುತ್ತವೆ’ ಎಂದು ಅಭ್ಯರ್ಥಿಗಳಿಗೆ ಕಿವಿಮಾತು ಹೇಳಿದರು.

ಕೌಶಲಾಭಿವೃದ್ಧಿ ಇಲಾಖೆಯ ರಾಜ್ಯ ಮುಖ್ಯಸ್ಥ ಕೌಸ್ತುಭನಾಥ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್, ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಜೇಶ್ ನಾಯ್ಕ, ರಾಮಕೃಷ್ಣಾಶ್ರಮದ ಭವೇಶಾನಂದ ಸ್ವಾಮೀಜಿ, ವೃಕ್ಷಂ ಸಂಸ್ಥೆಯ ಮುಖ್ಯಸ್ಥ ಸುರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT