ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ ಶೈಕ್ಷಣಿಕ ಜಿಲ್ಲೆ: ಪರೀಕ್ಷಾ ಕೇಂದ್ರಗಳಲ್ಲಿ ಸುರಕ್ಷತೆಗೆ ಒತ್ತು

ಎಸ್ಸೆಸ್ಸೆಲ್ಸಿ ಪರೀಕ್ಷೆ ನಾಳೆಯಿಂದ
Last Updated 24 ಜೂನ್ 2020, 12:08 IST
ಅಕ್ಷರ ಗಾತ್ರ

ಶಿರಸಿ: ಶಿರಸಿ ಶೈಕ್ಷಣಿಕ ಜಿಲ್ಲೆಯ ಎಲ್ಲ ಆರು ತಾಲ್ಲೂಕುಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಸಿದ್ಧತೆ ಅಂತಿಮಗೊಂಡಿದೆ. ಮಕ್ಕಳ ಆರೋಗ್ಯ ಸುರಕ್ಷತೆಯ ದೃಷ್ಟಿಯಿಂದ ಪರೀಕ್ಷಾ ಕೇಂದ್ರಗಳಲ್ಲಿ ಬುಧವಾರ ಪರೀಕ್ಷಾ ಕೇಂದ್ರಕ್ಕೆ ಮಕ್ಕಳನ್ನು ಬರಮಾಡಿಕೊಳ್ಳುವ ಅಣಕು ಪ್ರದರ್ಶನ ನಡೆಸಲಾಗಿದೆ.

ಜೂನ್ 25ರಂದು ದ್ವಿತೀಯ ಭಾಷೆ ಪರೀಕ್ಷೆ ನಡೆಯಲಿದೆ. ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ಜೊಯಿಡಾ ತಾಲ್ಲೂಕುಗಳು ಸೇರಿ ಒಟ್ಟು 35 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತದೆ. ಕೋವಿಡ್-19 ಕಾರಣಕ್ಕೆ ಹೆಚ್ಚುವರಿಯಾಗಿ ಐದು ಉಪಕೇಂದ್ರಗಳನ್ನು ಮಾಡಲಾಗಿದೆ. 9647 ರೆಗ್ಯುಲರ್, 509 ಪುನರಾವರ್ತಿತ ವಿದ್ಯಾರ್ಥಿಗಳು, 168 ಖಾಸಗಿ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ

ಪತ್ರಿ ಪರೀಕ್ಷಾ ಕೇಂದ್ರದಲ್ಲಿ ನಿರ್ದಿಷ್ಟ ಅಂತರದಲ್ಲಿ ಗುರುತನ್ನು ಹಾಕಲಾಗಿದ್ದು, ಮಕ್ಕಳು ಅದೇ ಗುರುತಿನಲ್ಲಿ ಸರದಿಯಲ್ಲಿ ನಿಂತು, ಥರ್ಮಲ್ ಸ್ಕ್ರೀನಿಂಗ್ ಮಾಡಿಸಿಕೊಂಡು, ಕೈಯನ್ನು ಸ್ಯಾನಿಟೈಸ್ ಮಾಡಿಕೊಂಡು ನೇರವಾಗಿ ಪರೀಕ್ಷಾ ಕೊಠಡಿಯೊಳಗಿನ ನಿಗದಿತ ಸ್ಥಳದಲ್ಲಿ ಕುಳಿತುಕೊಳ್ಳುವಂತೆ ಆಯಾ ಶಾಲೆಯಲ್ಲಿ ಮಕ್ಕಳಿಗೆ ಸೂಚನೆ ನೀಡಲಾಗಿದೆ. ಬಾಗಿಲು, ಕಿಟಕಿ, ಇತರ ವಸ್ತುಗಳನ್ನು ಅನಗತ್ಯವಾಗಿ ಮುಟ್ಟಬಾರದು. ಸಹಪಾಠಿಗಳ ಕೈ ಕುಲುಕುವುದು, ಮುಟ್ಟುವುದನ್ನು ಮಾಡಬಾರದೆಂದು ಸೂಚನೆ ನೀಡಲಾಗಿದೆ ಎಂದು ಡಿಡಿಪಿಐ ದಿವಾಕರ ಶೆಟ್ಟಿ ತಿಳಿಸಿದ್ದಾರೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಪ್ರತಿ ಮಗುವಿಗೆ ಸುರಕ್ಷತಾ ಕ್ರಮಗಳ ಕರಪತ್ರ, ಮುಖಗವಸನ್ನು ತಲುಪಿಸಲಾಗಿದೆ. ಒಂದೊಮ್ಮೆ ಮಗು ಮುಖಗವಸು ಮರೆತು ಬಂದಲ್ಲಿ, ಪರೀಕ್ಷಾ ಕೇಂದ್ರದಲ್ಲೇ ಪೂರೈಕೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

ಏನೇನು ಕೊಂಡೊಯ್ಯಬೇಕು?

* ಪ್ರವೇಶಪತ್ರ, ಬಾಲ್ ಪೆನ್, ಅಗತ್ಯ ಪರಿಕರಗಳು

* ಕುಡಿಯಲು ನೀರಿನ ಬಾಟಲಿ, ಕರವಸ್ತ್ರ

* ಪರೀಕ್ಷೆಪೂರ್ವ ತಿನ್ನಲು ಲಘು ಆಹಾರ ಡಬ್ಬಿ

ಪರೀಕ್ಷೆ ಎಷ್ಟೊತ್ತಿಗೆ ?

ಪರೀಕ್ಷೆಯ ಸಮಯ– 10.30

ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕಾದ ಸಮಯ– 9.30ರ ಒಳಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT