ಗುರುವಾರ , ಜನವರಿ 23, 2020
27 °C

ವಿದೇಶದಲ್ಲಿ ಉದ್ಯೋಗದ ಹಂಬಲ: ಮಹಿಳೆಗೆ ₹ 7.43 ಲಕ್ಷ ವಂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಕಾರವಾರ: ವಿದೇಶದಲ್ಲಿ ನೌಕರಿ ಪಡೆಯುವ ಹಂಬಲದಲ್ಲಿದ್ದ ಯಲ್ಲಾಪುರದ ಇಡಗುಂದಿಯ ಮಹಿಳೆಯೊಬ್ಬರು, ಫೇಸ್‌ಬುಕ್‌ನಲ್ಲಿದ್ದ ಸುಳ್ಳು ಜಾಹೀರಾತು ನಂಬಿ ₹ 7.43 ಲಕ್ಷ ಕಳೆದುಕೊಂಡಿದ್ದಾರೆ.

ಗೀತಾ ಎಂಬುವವರು ವಂಚನೆಗೆ ಒಳಗಾದವರು. ಬೆಂಗಳೂರಿನಲ್ಲಿ ಎಂಟು ತಿಂಗಳಿನಿಂದ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿರುವ ಅವರು, ವಿದೇಶದಲ್ಲಿ ನೌಕರಿ ಪಡೆಯಲು ಪ್ರಯತ್ನಿಸುತ್ತಿದ್ದರು. ಈ ನಡುವೆ, ಫೇಸ್‍ಬುಕ್‍ನಲ್ಲಿ ಹೇನ್‍ಕೇನ್ ಕಂಪನಿಯಲ್ಲಿ ಉದ್ಯೋಗವಿದೆ ಎಂಬ ಜಾಹೀರಾತು ಗಮನಿಸಿದರು. ಅದರಲ್ಲಿ ನೀಡಿದ್ದ ಮೊಬೈಲ್ ಸಂಖ್ಯೆಯನ್ನು ಅವರು ಸಂಪರ್ಕಿಸಿದ್ದರು.

ಕರೆ ಸ್ವೀಕರಿಸಿದ ವಂಚಕರು, ಉದ್ಯೋಗದ ಭರವಸೆ ನೀಡಿ ಆರಂಭದಲ್ಲಿ ₹ 15 ಸಾವಿರ ಪಾವತಿಸಲು ತಿಳಿಸಿದ್ದರು. ಇದೇರೀತಿ, ಹಲವು ಬಾರಿ ಹಣ ಜಮೆ ಮಾಡಿಸಿಕೊಂಡರು. ಅಷ್ಟರಲ್ಲಿ ಗೀತಾ, ₹ 7.43 ಲಕ್ಷವನ್ನು ವಂಚಕರ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದರು. ಅದಾದ ಬಳಿಕ ಮೋಸಗಾರರು ದೂರವಾಣಿ ಸಂಪರ್ಕವನ್ನೇ ಕಡಿಗೊಳಿಸಿದರ. ಇದರಿಂದ ತಾವು ಮೋಸ ಹೋಗಿದ್ದು ಅರಿವಿಗೆ ಬಂತು.

ಈ ಬಗ್ಗೆ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು