ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶದಲ್ಲಿ ಉದ್ಯೋಗದ ಹಂಬಲ: ಮಹಿಳೆಗೆ ₹ 7.43 ಲಕ್ಷ ವಂಚನೆ

Last Updated 13 ಜನವರಿ 2020, 10:00 IST
ಅಕ್ಷರ ಗಾತ್ರ

ಕಾರವಾರ:ವಿದೇಶದಲ್ಲಿನೌಕರಿ ಪಡೆಯುವ ಹಂಬಲದಲ್ಲಿದ್ದ ಯಲ್ಲಾಪುರದ ಇಡಗುಂದಿಯ ಮಹಿಳೆಯೊಬ್ಬರು, ಫೇಸ್‌ಬುಕ್‌ನಲ್ಲಿದ್ದ ಸುಳ್ಳು ಜಾಹೀರಾತು ನಂಬಿ₹7.43ಲಕ್ಷ ಕಳೆದುಕೊಂಡಿದ್ದಾರೆ.

ಗೀತಾ ಎಂಬುವವರು ವಂಚನೆಗೆ ಒಳಗಾದವರು. ಬೆಂಗಳೂರಿನಲ್ಲಿ ಎಂಟು ತಿಂಗಳಿನಿಂದ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿರುವ ಅವರು, ವಿದೇಶದಲ್ಲಿ ನೌಕರಿ ಪಡೆಯಲು ಪ್ರಯತ್ನಿಸುತ್ತಿದ್ದರು. ಈ ನಡುವೆ, ಫೇಸ್‍ಬುಕ್‍ನಲ್ಲಿ ಹೇನ್‍ಕೇನ್ ಕಂಪನಿಯಲ್ಲಿ ಉದ್ಯೋಗವಿದೆ ಎಂಬ ಜಾಹೀರಾತು ಗಮನಿಸಿದರು. ಅದರಲ್ಲಿ ನೀಡಿದ್ದ ಮೊಬೈಲ್ ಸಂಖ್ಯೆಯನ್ನು ಅವರುಸಂಪರ್ಕಿಸಿದ್ದರು.

ಕರೆ ಸ್ವೀಕರಿಸಿದ ವಂಚಕರು, ಉದ್ಯೋಗದ ಭರವಸೆ ನೀಡಿ ಆರಂಭದಲ್ಲಿ ₹ 15 ಸಾವಿರ ಪಾವತಿಸಲು ತಿಳಿಸಿದ್ದರು. ಇದೇರೀತಿ, ಹಲವು ಬಾರಿ ಹಣ ಜಮೆ ಮಾಡಿಸಿಕೊಂಡರು. ಅಷ್ಟರಲ್ಲಿ ಗೀತಾ, ₹ 7.43 ಲಕ್ಷವನ್ನು ವಂಚಕರ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದರು. ಅದಾದ ಬಳಿಕ ಮೋಸಗಾರರು ದೂರವಾಣಿ ಸಂಪರ್ಕವನ್ನೇಕಡಿಗೊಳಿಸಿದರ.ಇದರಿಂದತಾವುಮೋಸ ಹೋಗಿದ್ದು ಅರಿವಿಗೆ ಬಂತು.

ಈ ಬಗ್ಗೆ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ದೂರುದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT