ಗುರುವಾರ , ಡಿಸೆಂಬರ್ 12, 2019
16 °C

‘ಮೊಕ್ಸಿ–ಹೊಪರ್’ ಕಥೆಗೆ ದಂಗಾದ ಮಕ್ಕಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಧರ್ಮ, ಇತಿಹಾಸ, ಪೌರಾಣಿಕವನ್ನು ಕಥಾ ನಿರೂಪಣೆ ಮೂಲಕ ಹೇಳಿ ಮಕ್ಕಳ ಮನಸ್ಸನ್ನು ತಟ್ಟುವ ಬೆಂಗಳೂರಿನ ಮೊಕ್ಸಿ ಆ್ಯಂಡ್ ಹೊಪರ್ ತಂಡವು ನಗರದ ವಿವಿಧೆಡೆಗಳಲ್ಲಿ ಇತ್ತೀಚೆಗೆ ಪ್ರದರ್ಶನ ನೀಡಿತು.

ಎಂಜಿನಿಯರ್, ಉದ್ಯಮಿ, ವಕೀಲ ಹೀಗೆ ವಿವಿಧ ವೃತ್ತಿಯಲ್ಲಿದ್ದ ಎಂಟು ಯುವಜನರು, ಅದನ್ನು ಬದಿಗೆ ಸರಿಸಿ, ಕಥಾ ನಿರೂಪಣೆಯನ್ನೇ ನೆಚ್ಚಿಕೊಂಡಿದ್ದಾರೆ. ಲಯನ್ಸ್, ಚಂದನ, ಶ್ರೀನಿಕೇತನ, ಎಂಇಎಸ್, ಡಾನ್‌ಬೋಸ್ಕೊ, ಬಾಲಮಂದಿರದ ಹಾಸ್ಟೆಲ್ ವಿದ್ಯಾರ್ಥಿಗಳು ಕಥಾ ನಿರೂಪಣೆಯ ಪ್ರಯೋಜನ ಪಡೆದರು. ಮೊಕ್ಸಿ ಮತ್ತು ಹಾಪರ್ ತಂಡದವರು, ಕಥೆಯನ್ನಷ್ಟೇ ಹೇಳದೆ, ಧ್ವನಿಗಳ ಏರಿಳಿತ, ಅಭಿನಯ, ಗೀತೆ, ಅನುಕರಣೆ, ಬೆಳಕು-ನೆರಳಿನ ಸಂಯೋಜನೆ, ಛಾಯಾ ಪ್ರದರ್ಶನ, ಕೈಗೊಂಬೆ ಪ್ರದರ್ಶನ ಇತ್ಯಾದಿಗಳ ಜೊತೆಗೆ ಕೇಳುಗರ ನಡುವೆಯೇ ಓಡಾಡಿಕೊಂಡು ಕಥೆ ಹೇಳಿದರು. ಮಕ್ಕಳಿಗೆ ಮನರಂಜನೆ ಜೊತೆಗೆ ನೀತಿಪಾಠಗಳನ್ನು ತಿಳಿಸಿದರು.

ಮಕ್ಕಳ ದಿನಾಚರಣೆ ಅಂಗವಾಗಿ ರೋಟರಿ ಕ್ಲಬ್ ಹಾಗೂ ಇನ್ನರ್‌ವೀಲ್ ನೇತೃತ್ವದಲ್ಲಿ ವಿವಿಧೆಡೆ 13 ಕಾರ್ಯಕ್ರಮಗಳು ನಡೆದವು. 2000ಕ್ಕೂ ಹೆಚ್ಚು ಮಕ್ಕಳು ಇದರ ಪ್ರಯೋಜನ ಪಡೆದರು. ಸಿಂಧು ಗೌತಮಿ, ವಿವೇಕ್, ಶ್ರೀನಿವಾಸ ತಂಡದ ಮುಂದಾಳತ್ವ ವಹಿಸಿದ್ದರು.

ಪ್ರತಿಕ್ರಿಯಿಸಿ (+)