ಬುಧವಾರ, ಆಗಸ್ಟ್ 21, 2019
27 °C

ವಿದ್ಯಾರ್ಥಿನಿ ಆತ್ಮಹತ್ಯೆ

Published:
Updated:
Prajavani

ಶಿರಸಿ: ಕಾಲೇಜಿನ ಶೌಚಾಲಯದಲ್ಲಿ ನೇಣು ಹಾಕಿಕೊಂಡು ವಿದ್ಯಾರ್ಥಿನಿಯೊಬ್ಬಳು ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇಲ್ಲಿನ ಜೆಎಂಜೆ ಕಾಲೇಜಿನ ವಿದ್ಯಾರ್ಥಿನಿ, ಹಾವೇರಿ ನೆಗಳೂರಿನ ಮೊಬಿನಾ (15) ಆತ್ಮಹತ್ಯೆ ಮಾಡಿಕೊಂಡವಳು.

ಹಾಸ್ಟೆಲ್‌ನಲ್ಲಿ ಉಳಿದುಕೊಂಡು ಕಾಲೇಜಿಗೆ ಹೋಗುತ್ತಿದ್ದ ಈಕೆ, ಊರಿಗೆ ಹೋಗಿ ಬುಧವಾರ ವಾಪಸ್ ಬಂದಿದ್ದಳು. ನವೋದಯ ಶಾಲೆಯಲ್ಲಿ ಓದಿದ್ದ ಈಕೆ ಎಸ್ಸೆಸ್ಸೆಲ್ಸಿಯಲ್ಲಿ ಶೇ 97 ಅಂಕ ಪಡೆದಿದ್ದಳು. ‘ನನ್ನ ದೇಹವನ್ನು ಅಪ್ಪನ ಮನೆಗೆ ತೆಗೆದುಕೊಂಡು ಹೋಗುವುದು ಬೇಡ, ಅಜ್ಜಿ ಮನೆಯಲ್ಲಿ ದಫನ್ ಮಾಡಿ’ ಎಂದು ಡೆತ್‌ನೋಟ್ ಬರೆದಿಟ್ಟಿದ್ದಾಳೆ ಮೊಬಿನಾ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Post Comments (+)