ಮಂಗಳವಾರ, ನವೆಂಬರ್ 12, 2019
20 °C

ಸಂಪೂರ್ಣ ಚೇತರಿಸಿಕೊಂಡ ಜಾನಪದ ಗಾಯಕಿ ಸುಕ್ರಜ್ಜಿ

Published:
Updated:
Prajavani

ಕಾರವಾರ: ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಜಾನಪದ ಗಾಯಕಿ ಸುಕ್ರಿ ಬೊಮ್ಮುಗೌಡ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಅವರನ್ನು ನಗರದ ಜಿಲ್ಲಾ ಆಸ್ಪತ್ರೆಯಿಂದ ಮಂಗಳವಾರ ಮನೆಗೆ ಕಳುಹಿಸಿಕೊಡಲಾಯಿತು.

ಸೆ.12ರಂದು ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರನ್ನು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆರೋಗ್ಯ ಪರಿಶೀಲಿಸಿದ ವೈದ್ಯರು, ಮಂಗಳವಾರದವರೆಗೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿದರು. ಗುಣಮುಖರಾದ ಅವರನ್ನು ಅಂಕೋಲಾ ತಾಲ್ಲೂಕಿನ ಬಡಿಗೇರಿಯಲ್ಲಿರುವ ಮನೆಗೆ ಕರೆದುಕೊಂಡು ಹೋಗಲಾಯಿತು. 

83 ವರ್ಷದ ಸುಕ್ರಜ್ಜಿ, ಜುಲೈ 5ರಂದು ಕೂಡ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿ ಐದು ದಿನ ಚಿಕಿತ್ಸೆ ಪಡೆದಿದ್ದರು.

ಪ್ರತಿಕ್ರಿಯಿಸಿ (+)