ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದವೀಧರರಿಂದ ಬೆಂಬಲ:ವಿಶ್ವಾಸ

ಮುಂಡಗೋಡ,ಯಲ್ಲಾಪುರದಲ್ಲಿ ಎಸ್‌. ವಿ. ಸಂಕನೂರ ಪ್ರಚಾರ
Last Updated 24 ಅಕ್ಟೋಬರ್ 2020, 2:33 IST
ಅಕ್ಷರ ಗಾತ್ರ

ಮುಂಡಗೋಡ:‘ಬಹುದಿನಗಳ ಬೇಡಿಕೆ ಯಂತೆ ಶಿಕ್ಷಕರ ವರ್ಗಾವಣೆಗೆ ಮುಂದಿನ ತಿಂಗಳು ಚಾಲನೆ ಸಿಗಲಿದ್ದು, 50 ವರ್ಷ ಮೇಲ್ಪಟ್ಟ ಶಿಕ್ಷಕಿಯರಿಗೆ ಕಡ್ಡಾಯ ವರ್ಗಾವಣೆಯಿಂದ ವಿನಾಯಿತಿ ಸಿಗಲಿದೆ’ ಎಂದು ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ.ಸಂಕನೂರು ಹೇಳಿದರು.

ಇಲ್ಲಿನ ಕಂಬಾರಗಟ್ಟಿ ಪ್ಲಾಟ್‌ ನಲ್ಲಿ ಶುಕ್ರವಾರ ಪದವೀಧರ ಶಿಕ್ಷಕರ ಮತಯಾಚಿಸಿ, ನಂತರ ಮಾತ ನಾಡಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜ್ಯೂನಿಯರ್ ಕಾಲೇಜು, ಜೆಎಂಎಫ್ ಸಿ ನ್ಯಾಯಾಲಯ ಹಾಗೂ ಮುರಾರ್ಜಿ ವಸತಿ ಶಾಲೆಗೆ ತೆರಳಿ ಅವರು ಮತಯಾಚಿಸಿದರು.

‘ಪದವಿ ಪಡೆದಿರುವ ಶಿಕ್ಷಕರನ್ನು ಕಿರಿಯ ಪ್ರಾಥಮಿಕ ತರಗತಿಗೆ ಸೀಮಿತಗೊಳಿಸುವುದು ಸರಿಯಲ್ಲ.ವೈಯಕ್ತಿಕವಾಗಿ ವಿರೋಧವಿದೆ. ಟಿಜಿಟಿ ಶಿಕ್ಷಕರಂತೆ ಇವರನ್ನೂ ಪರಿಗಣಿಸಬೇಕು. ಪದವೀಧರ ಸಮಸ್ಯೆಗಳ ಪರಿಹಾರಕ್ಕೆ ಕಳೆದ ಐದು ವರ್ಷಗಳಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಈ ಸಲವೂ ಪದವೀಧರರು ತಮಗೆ ಸಂಪೂರ್ಣ ಬೆಂಬಲ ನೀಡುವ ವಿಶ್ವಾಸವಿದೆ' ಎಂದರು.

ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ ಮಾತನಾಡಿ, ‘ಪದವೀಧರರು ಮತದಾನ ಮಾಡು ವಾಗ ಮತಕುಲಗೆಡದಂತೆ ಎಚ್ಚರಿಕೆ ವಹಿಸಬೇಕು. ಆಡಳಿತ ಪಕ್ಷದ ಅಭ್ಯರ್ಥಿ ಎಸ್.ವಿ.ಸಂಕನೂರು ಅವರನ್ನೇ ಆರಿಸುವುದರಿಂದ ಸಮಸ್ಯೆ ಗಳ ತ್ವರಿತ ಪರಿಹಾರಕ್ಕೆ ನೆರವಾಗಲಿದೆ’ ಎಂದರು.

ವಿಧಾನಪರಿಷತ್ ಸದಸ್ಯ ಶಾಂತಾ ರಾಮ ಸಿದ್ಧಿ, ಜಿಲ್ಲಾ ಪಂಚಾಯ್ತಿ ಸದಸ್ಯ ಎಲ್.ಟಿ.ಪಾಟೀಲ ಮಾತನಾಡಿದರು. ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ನಾಗಭೂಷಣ ಹಾವಣಗಿ, ಅಶೋಕ ಚಲವಾದಿ, ಉಮೇಶ ವಿಜಾಪುರ, ಗುಡ್ಡಪ್ಪ ಕಾತೂರ, ನಾಗರಾಜ ಕುನ್ನೂರ, ಗುರುರಾಜ ಕಾಮತ್, ಬಸವರಾಜ ತನಖೆದಾರ, ರವಿ ಹಾವೇರಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT