ಗುರುವಾರ , ಅಕ್ಟೋಬರ್ 24, 2019
21 °C

ಬೆಂಗಳೂರು– ಕಾರವಾರ ನಡುವೆ ವಿಶೇಷ ರೈಲು

Published:
Updated:

ಕಾರವಾರ: ದೀಪಾವಳಿ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡುವ ಸಲುವಾಗಿ ಬೆಂಗಳೂರು ಸಿಟಿ ಜಂಕ್ಷನ್ (ಮೆಜೆಸ್ಟಿಕ್) – ಕಾರವಾರ– ಯಲಹಂಕ ಜಂಕ್ಷನ್ ನಡುವೆ ‘ಸುವಿಧಾ ಸ್ಪೆಷಲ್’ ರೈಲುಗಳು ಸಂಚರಿಸಲಿವೆ.

ಮೆಜೆಸ್ಟಿಕ್‌ನಿಂದ ಅ.25 ಮತ್ತು 28ರಂದು 11.55ಕ್ಕೆ ಹೊರಡಲಿದ್ದು, ಮರುದಿನ ಮಧ್ಯಾಹ್ನ 3.30ಕ್ಕೆ ಕಾರವಾರಕ್ಕೆ ತಲುಪಲಿವೆ. ಕಾರವಾರದಿಂದ ಅ.26 ಮತ್ತು ಅ.29ರಂದು ಸಂಜೆ 4ಕ್ಕೆ ರೈಲುಗಳು ಸಂಚರಿಸಲಿವೆ. ಅವು ಮರುದಿನ ಬೆಳಿಗ್ಗೆ 8ಕ್ಕೆ ಯಲಹಂಕ ತಲುಪಲಿವೆ. ಈ ರೈಲಿಗೆ ವಿಶೇಷ ಪ್ರಯಾಣ ದರ ನಿಗದಿ ಮಾಡಲಾಗಿದೆ. ಇವು ಶ್ರವಣಬೆಳಗೊಳದ ಮೂಲಕ ಸಾಗುತ್ತವೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ. 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)