ಮಂಗಳವಾರ, ಅಕ್ಟೋಬರ್ 22, 2019
26 °C

ವಸಂತ ಭಟ್ಟರಿಗೆ ‘ಎಸ್ವಿ ಪ್ರಶಸ್ತಿ’

Published:
Updated:
Prajavani

ಶಿರಸಿ: ಇಲ್ಲಿನ ಜನಶಕ್ತಿ ವಿಶ್ವಸ್ಥ ಮಂಡಳಿಯು ಹಿರಿಯ ಪತ್ರಕರ್ತ ಎಸ್‌.ವಿ.ಹೆಗಡೆ ಸ್ಮರಣಾರ್ಥ ನೀಡುವ ‘ಎಸ್ವಿ ಪ್ರಶಸ್ತಿ’ಯನ್ನು ಈ ವರ್ಷ ಪತ್ರಕರ್ತ ವಸಂತ ಭಟ್ ಕತಗಾಲ ಅವರಿಗೆ ಘೋಷಿಸಲಾಗಿದೆ. ಪ್ರಶಸ್ತಿಯು ₹ 3000 ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆಯನ್ನು ಒಳಗೊಂಡಿದೆ.

ಅ.7ರಂದು ‘ಲೋಕಧ್ವನಿ’ ದಿನಪತ್ರಿಕೆ ಕಾರ್ಯಾಲಯದಲ್ಲಿ ನಡೆಯುವ ಆಯುಧಪೂಜೆ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಸಾಮಾಜಿಕ ಹಿತಾಸಕ್ತಿ, ಬದ್ಧತೆ, ಮಾಹಿತಿಪೂರ್ಣ ಬರಹ, ಹಿರಿತನದ ಜೊತೆಗೆ ಸಾಮಾಜಿಕ ವ್ಯಕ್ತಿತ್ವವನ್ನು ಪರಿಗಣಿಸಿ, ಪ್ರತಿವರ್ಷ ಒಬ್ಬರು ಪತ್ರಕರ್ತರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ ಎಂದು ಜನಶಕ್ತಿ ವಿಶ್ವಸ್ಥ ಮಂಡಳಿ ವ್ಯವಸ್ಥಾಪಕ ಟ್ರಸ್ಟಿ ಎಸ್.ಬಿ. ಹಿರೇಮಠ ತಿಳಿಸಿದ್ದಾರೆ.

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)