ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ | ಶಿವರಾತ್ರಿ ಸಡಗರ: ಗೋಕರ್ಣದ ಸಿಹಿ ಗೆಣಸಿಗೆ ಹೆಚ್ಚಿದ ಬೇಡಿಕೆ

ಕಾರವಾರದಲ್ಲಿ ಶಿವರಾತ್ರಿಗೆ ಭರದ ಸಿದ್ಧತೆ: ಮಾರುಕಟ್ಟೆಯಲ್ಲಿ ಜನಜಂಗುಳಿ
Last Updated 20 ಫೆಬ್ರುವರಿ 2020, 14:01 IST
ಅಕ್ಷರ ಗಾತ್ರ

ಕಾರವಾರ: ತಾಲ್ಲೂಕಿನಲ್ಲಿ ಶಿವರಾತ್ರಿ ಹಬ್ಬದ ಸಿದ್ಧತೆ ಭರದಿಂದ ಸಾಗಿದೆ. ಪ್ರಸಿದ್ಧ ಶೇಜವಾಡದ ಶೆಜ್ಜೇಶ್ವರ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಪೂರ್ವ ತಯಾರಿಯನ್ನು ಗುರುವಾರ ಹಮ್ಮಿಕೊಳ್ಳಲಾಯಿತು.

ಶುಕ್ರವಾರ ಬೆಳಿಗ್ಗೆ4ರಿಂದ ಸಂಜೆ6ರವರೆಗೆ ಪಂಚಾಮೃತ ಅಭಿಷೇಕ ನಡೆಯಲಿದೆ.ಸಂಜೆ7ರಿಂದ ಶೆಜ್ಜೇಶ್ವರ ಭಜನಾ ಮಂಡಳಿಯವರಿಂದ ಸಂಗೀತ ಸಂಧ್ಯಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅಷ್ಟಮಂಗಲ ಪ್ರಶ್ನೆಯಲ್ಲಿ ತಿಳಿಸಿರುವಂತೆಹಿಂದಿನವರ್ಷದಿಂದ ಭಕ್ತರಿಗೆಗರ್ಭಗುಡಿಯೊಳಗೆ ಪ್ರವೇಶ ನಿರ್ಬಂಧಿಸಲಾಗಿದೆ.ಗರ್ಭಗುಡಿಯ ಹೊರಭಾಗದಿಂದಲೇ ಅಭಿಷೇಕಕ್ಕೆ ಅವಕಾಶ ಇರುತ್ತದೆ.

2.30ಕ್ಕೆ ದರ್ಶನ: ನಗರದಬಾಡ ಮಹಾದೇವ ದೇವಸ್ಥಾನದಲ್ಲಿ ಬೆಳಿಗ್ಗೆ 2.30ರಿಂದಲೇ ದೇವರಿಗೆ ಅಭಿಷೇಕ ಆರಂಭಗೊಳ್ಳಲಿದೆ. ಎಳನೀರು ಶ್ರೇಷ್ಠವಾಗಿರುವುದರಿಂದ ಹೆಚ್ಚಿನ ಭಕ್ತರು ಅಭಿಷೇಕ ಸೇವೆಯನ್ನು ಮಾಡಲಿದ್ದಾರೆ. ಬೆಳಿಗ್ಗೆ 8ಗಂಟೆಯಿಂದ ನಿರಂತರವಾಗಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ವಿವಿಧ ತಂಡಗಳಿಂದ ಭಜನಾ ಸೇವೆಯು ದೇಗುಲದ ಆವರಣದಲ್ಲಿ ನಡೆಯಲಿದೆ. 23ರಂದು ದೇವರ ಪಲ್ಲಕ್ಕಿಯು ಸಮುದ್ರ ಸ್ನಾನಕ್ಕೆ ತೆರಳಲಿದೆ ಎಂದು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ದೀಪಕ ಕಳಸ ತಿಳಿಸಿದರು.

ಮಾರುಕಟ್ಟೆಯಲ್ಲಿ ಗುರುವಾರಶಿವರಾತ್ರಿ ಹಬ್ಬದ ಪ್ರಯುಕ್ತ ಉತ್ತಮ ವ್ಯಾಪಾರ ವಹಿವಾಟು ಕಂಡುಬಂದಿತು. ಹೂವು, ಹಣ್ಣುಗಳ ಖರೀದಿ ಜೋರಾಗಿತ್ತು. ಶಿವನಿಗೆ ಪ್ರಿಯವಾದ ಎಕ್ಕೆ ಹಾರ, ಬಿಲ್ವಪತ್ರೆಗಳ ಖರೀದಿ ಹೆಚ್ಚಾಗಿ ಕಂಡುಬಂದಿತು.

‘ಜನರು ತಮ್ಮ ಮನೆಗಳಲ್ಲೇ ಬಿಲ್ವಪತ್ರೆ ಗಿಡಗಳನ್ನು ಬೆಳೆಸಲು ಶುರು ಮಾಡಿದ್ದಾರೆ. ಹಾಗಾಗಿ ಪ್ರತಿವರ್ಷಕ್ಕಿಂತ ಈ ಬಾರಿ ವ್ಯಾಪಾರಮಂದಗತಿಯಲ್ಲಿದೆ.ಬಿಲ್ವಪತ್ರೆ ಒಂದು ಪಾಲಿಗೆ₹ 10 ಹಾಗೂ ಎಕ್ಕೆ ಹಾರ ₹ 20ರಲ್ಲಿ ಮಾರಾಟವಾಗುತ್ತಿದೆ’ ಎಂದು ವ್ಯಾಪಾರಿ ನಾಗಮ್ಮ ಹೇಳಿದರು.

ಗೋಕರ್ಣದ ಗೆಣಸು: ಕಾರವಾರದ ಮಾರುಕಟ್ಟೆಗೆ ಗೋಕರ್ಣದ ಗೆಣಸು ಲಗ್ಗೆಯಿಟ್ಟಿದೆ. ಬಿಳಿ, ಕೆಂಪು ಬಣ್ಣದ, ಸಣ್ಣ ಹಾಗೂ ದೊಡ್ಡ ಗಾತ್ರದ ಗೆಣಸುಗಳನ್ನು ಮಾರಾಟಕ್ಕೆ ಇಡಲಾಗಿದೆ. ಪ್ರತಿ ಕೆ.ಜಿ.ಗೆ₹ 40ರಂತೆ ಬಿಕರಿಯಾದವು.

‘ನಗರಕ್ಕೆ ಸಂಪೂರ್ಣವಾಗಿ ಗೋಕರ್ಣದ ಗೆಣಸನ್ನೇ ಆವಕ ಮಾಡಿಕೊಂಡಿದ್ದೇವೆ.ಶಿವರಾತ್ರಿಯ ಉಪವಾಸಕ್ಕೆ ಸಾರ್ವಜನಿಕರು ಇದನ್ನೇ ಹೆಚ್ಚಾಗಿ ಅವಲಂಬಿಸುತ್ತಾರೆ. ಹಾಗಾಗಿ ಇದಕ್ಕೆ ಉತ್ತಮ ಬೇಡಿಕೆಯಿದೆ’ ಎಂದು ವ್ಯಾಪಾರಿ ಮಹಿಳೆಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT