ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರೆಂದು ಪರಿಗಣಿಸಿ’

Last Updated 1 ಜೂನ್ 2019, 14:37 IST
ಅಕ್ಷರ ಗಾತ್ರ

ಜೊಯಿಡಾ:ಪದವಿ ವಿದ್ಯಾರ್ಹತೆ ಹಾಗೂ ಸೇವಾನುಭವ ಪಡೆದ ಸೇವಾನಿರತ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು (6ರಿಂದ 8ನೇ ತರಗತಿ) ಎಂದು ಪರಿಗಣಿಸಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆಗ್ರಹಿಸಿದೆ.

ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸಂಘದ ತಾಲ್ಲೂಕುಘಟಕ ಸದಸ್ಯರುಶನಿವಾರ ಮನವಿ ಸಲ್ಲಿಸಿದರು.

ಒಂದರಿಂದ ಏಳನೇ ತರಗತಿಗಳ ಶಿಕ್ಷಕರಾಗಿನೇಮಕವಾದ ಪ್ರಾಥಮಿಕ ಶಾಲಾ ಸಹ ಶಿಕ್ಷಕರು, ಒಂದರಿಂದ ಏಳನೇ ತರಗತಿಗೆ ಬೋಧನೆ ಮಾಡುತ್ತಿದ್ದಾರೆ.2005ರಿಂದ 6ರಿಂದ 8ನೇ ತರಗತಿಗಳ ವಿದ್ಯಾರ್ಥಿಗಳಿಗೂ ಪಾಠ ಮಾಡುತ್ತಿದ್ದಾರೆ.ಆದರೆ, ಶಿಕ್ಷಣ ಇಲಾಖೆ ತನ್ನ ಸಿ ಆ್ಯಂಡ್ಆರ್ ನಿಯಮದ ಪ್ರಕಾರ 1ರಿಂದ5 ಮತ್ತು 6ರಿಂದ 8ಎಂದು ವಿಭಾಗಿಸಿದೆ. ಈಗಾಗಲೇ ನೇಮಕವಾದ ಶಿಕ್ಷಕರುಪದವಿ ಹಾಗೂ ಸೇವಾನುಭವ, ಸೇವಾಹಿರಿತನ ಹೊಂದಿದ್ದರೂ1ರಿಂದ 5ನೇ ತರಗತಿಗೆ ಸೀಮಿತಗೊಳಿಸಿದೆ.

‘ಈಗಾಗಲೇ ಎರಡು ಬಾರಿ 6ರಿಂದ 8ನೇ ತರಗತಿಗಳಿಗೆ ಶಿಕ್ಷಕರ ನೇಮಕಾತಿಯಾಗಿದೆ. ಮೂರನೇ ಬಾರಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಈಗಿರುವ ಶಿಕ್ಷಕರನ್ನು ಅರ್ಹತೆ ಇದ್ದರೂ ಪರಿಗಣಿಸದೇ ಹಿಂಬಡ್ತಿ ನೀಡಿರುವುದು ಎಷ್ಟು ಸಮಂಜಸ’ ಎಂದು ಸಂಘದ ಸದಸ್ಯರು ಪ್ರಶ್ನಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಹಾದೇವ ಹಳದನಕರ, ಕಾರ್ಯದರ್ಶಿ ದೀಪಕ್ ಗೋಕರ್ಣ, ಜಿಲ್ಲಾ ಘಟಕದ ಉಪಾಧ್ಯಕ್ಷೆ ಶ್ರೀದೇವಿ ಫುಲೆ, ರಾಜ್ಯ ಘಟಕದ ನಾಮ ನಿರ್ದೇಶಿತ ಉಪಾಧ್ಯಕ್ಷ ಯಶವಂತ ನಾಯ್ಕ, ಪದಾಧಿಕಾರಿಗಳಾದ ಜನಾರ್ದನ ಹೆಗಡೆ, ಸಿಆರ್‌ಪಿಗಳು ಹಾಗೂ ಪದವೀಧರ ಶಿಕ್ಷಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT