ಬುಧವಾರ, ನವೆಂಬರ್ 25, 2020
19 °C

ಕಂದಕಕ್ಕೆ ಉರುಳಿದ ಕಾರು: ಒಬ್ಬರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊನ್ನಾವರ: ತಾಲ್ಲೂಕಿನ ಹಡಿನಬಾಳ ಸಮೀಪ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಗುರುವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಕಾರೊಂದು ಸೇತುವೆಯಿಂದ ಕಂದಕಕ್ಕೆ ಉರುಳಿ ಬಿದ್ದಿದೆ. ಅವಘಡದಲ್ಲಿ ಕಾರಿನಲ್ಲಿದ್ದ ಒಬ್ಬ ಪ್ರಯಾಣಿಕ ಮೃತಪಟ್ಟಿದ್ದಾರೆ.

ಶಿವಮೊಗ್ಗದ ಔಷಧಿ ವ್ಯಾಪಾರಿ, ರಾಹುಲ್ ಪಾರೆಸಮಾಲ್ (32) ಮೃತರು. ಕಾರಿನಲ್ಲಿದ್ದ  ಶಿವಮೊಗ್ಗದ ಕೆ.ಆರ್.ಪುರಂ ನಿವಾಸಿಗಳಾದ ಚೇತನ ಮೋಹನ ಲಾಲ್ ಹಾಗೂ ವಂದನಾ ಚೇತನ್, ನೇಹಾ ಗಾಯಗೊಂಡಿದ್ದಾರೆ.

ನಿರ್ಲಕ್ಷ್ಯದ ಕಾರು ಚಾಲನೆಯಿಂದ ಅಪಘಾತವಾಗಿದೆ ಎಂದು ಚೇತನ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು