ಟಿಬೆಟನ್ ಹೊಸ ವರ್ಷಕ್ಕೆ ಸಂಭ್ರಮದ ಸ್ವಾಗತ

7

ಟಿಬೆಟನ್ ಹೊಸ ವರ್ಷಕ್ಕೆ ಸಂಭ್ರಮದ ಸ್ವಾಗತ

Published:
Updated:
Prajavani

ಮುಂಡಗೋಡ: ಟಿಬೆಟನ್ನರು ಹೊಸ ವರ್ಷ ‘ಲೋಸಾರ್’ ಅನ್ನು ಮಂಗಳವಾರ ಸಂಭ್ರಮದಿಂದ ಸ್ವಾಗತಿಸಿದರು. ಸೋಮವಾರ ಸಂಜೆಯಿಂದಲೇ ಕ್ಯಾಂಪ್ ನಂ.1ರ ಗಾಡೆನ್ ಜಾಂಗತ್ಸೆ ಬೌದ್ಧ ಮಂದಿರದಲ್ಲಿ ಬಿಕ್ಕುಗಳು ವಿಶೇಷ ಪೂಜೆ ಸಲ್ಲಿಸಿದರು.

ಬೆಳಿಗ್ಗೆಯವರೆಗೆ ನಡೆದ ಲ್ಹಾಮೋ ಪುನ್ಸೋಕ್ ಪೂಜೆಯಲ್ಲಿ ಒಂಬತ್ತು ಬೌದ್ಧ ಮಂದಿರಗಳ ಮುಖಂಡರು, ಬಿಕ್ಕುಗಳು ಸೇರಿದಂತೆ ಇತರ ಟಿಬೆಟನ್ನರು ಪಾಲ್ಗೊಂಡಿದ್ದರು. ಹಬ್ಬಕ್ಕೆಂದು ತಯಾರಿಸಲಾಗಿದ್ದ ಖಾದ್ಯಗಳನ್ನು ದೇವರಿಗೆ ಸಮರ್ಪಿಸಲಾಯಿತು.

ಲೋಸಾರ್ ಹಬ್ಬಕ್ಕೆಂದು ಬೌದ್ಧ ಮಂದಿರಗಳನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು. ಬೌದ್ಧ ಮಂದಿರಗಳಲ್ಲಿ ಹಣ್ಣುಹಂಪಲು, ಸಿಹಿ ತಿನಿಸುಗಳನ್ನು ಇಡಲಾಗಿತ್ತು. ಟಿಬೆಟನ್ನರು ಮೊದಲ ದಿನದ ಪೂಜೆಯಲ್ಲಿ ಪಾಲ್ಗೊಂಡು ಹಬ್ಬದ ಶುಭಾಶಯ (ತಾಶಿ ದೆಲೆಕ್) ವಿನಿಮಯ ಮಾಡಿಕೊಂಡರು.

ಟಿಬೆಟನ್ನರಿಗೆ ಲೋಸಾರ್ ಎಂದರೆ ಹೊಸ ವರ್ಷವಾಗಿದ್ದು, 15 ದಿನಗಳವರೆಗೆ ಸಂಭ್ರಮ ಆಚರಿಸಲಾಗುತ್ತದೆ. ಲೋಸಾರ್ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿರುತ್ತದೆ ಎಂದು ಟಿಬೆಟನ್ ಮುಖಂಡ ಜಂಪಾ ಲೋಬ್ಸಂಗ್ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !