ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

300 ಕಿ.ಮೀ ದೂರ ನಡೆದ ಗಂಡು ಹುಲಿ!

ಚಂಡೋಳಿ ರಾಷ್ಟ್ರೀಯ ಉದ್ಯಾನದಿಂದ ಜೊಯಿಡಾಕ್ಕೆ ಬಂದ ವ್ಯಾಘ್ರ
Last Updated 30 ಜುಲೈ 2020, 15:00 IST
ಅಕ್ಷರ ಗಾತ್ರ

ಜೊಯಿಡಾ: ಮಹಾರಾಷ್ಟ್ರದ ಚಂಡೋಳಿ ರಾಷ್ಟ್ರೀಯ ಉದ್ಯಾನದ ಸಹ್ಯಾದ್ರಿ ಹುಲಿ ಸಂರಕ್ಷಣಾ ಧಾಮದಿಂದ ಜೊಯಿಡಾ ಕಾಳಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಗಂಡು ಹುಲಿಯೊಂದು ಬಂದಿದೆ. ಅದು ಸುಮಾರು 300 ಕಿ.ಮೀ ದೂರ ನಡೆದು ಬಂದಿರುವುದು ಕ್ಯಾಮೆರಾ ಬಲೆಗಳ ಮೂಲಕ ತಿಳಿದುಬಂದಿದೆ.

ಈ ಹುಲಿ 2018ರಲ್ಲಿ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದ ನಂದೂರಬಾರ್‌ನಲ್ಲಿ ಮೊದಲ ಬಾರಿಗೆ ಕ್ಯಾಮೆರಾದಲ್ಲಿ ಸೆರೆ ಸಿಕ್ಕಿತ್ತು. ನಂತರ 2020 ಏಪ್ರಿಲ್– ಮೇ ತಿಂಗಳಲ್ಲಿ ದಾಂಡೇಲಿಯ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿ ಹಲವು ಬಾರಿ ಕಾಣಿಸಿಕೊಂಡಿತ್ತು ಎಂದು ಕರ್ನಾಟಕ ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಎರಡು ವರ್ಷಗಳಲ್ಲಿ ಹುಲಿ ಸುಮಾರು 300 ಕಿ.ಮೀ ಪ್ರದೇಶವನ್ನು ಚಲಿಸಿರುವುದು ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಎರಡು ಹುಲಿ ಸಂರಕ್ಷಿತ ಪ್ರದೇಶಗಳ ನಡುವಿನ ಅಂತರವು ಸುಮಾರು 225 ಕಿ.ಮೀ. ಆದರೆ, ಹುಲಿಯು ಕೆಲವು ಕಡೆ ಚಲಿಸಲು ಹೆಚ್ಚು ಸಮಯ ತೆಗೆದುಕೊಂಡಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಹುಲಿಗಳು ಹಾಗೂ ಇತರ ಪ್ರಾಣಿಗಳನ್ನು ಗುರುತಿಸುವ ಸಲುವಾಗಿ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಾಕಷ್ಟು ಕ್ಯಾಮೆರಾಗಳನ್ನು ಇಡಲಾಗಿದೆ. 2018ರಲ್ಲಿ ನಡೆದ ಹುಲಿ ಗಣತಿಯಲ್ಲಿ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಎಂಟು ಹುಲಿಗಳು ಕಾಣಿಸಿಕೊಂಡಿದ್ದವು. ಆದರೆ, ಕೇಂದ್ರ ಸರ್ಕಾರವು ನೀಡಿದ ಗಣತಿಯ ವರದಿಯಲ್ಲಿ ಕೇವಲ ನಾಲ್ಕು ಹುಲಿಗಳಿವೆ ಎಂದು ಗುರುತಿಸಲಾಗಿದೆ. ಈ ಕುರಿತು ಅಧ್ಯಯನ ನಡೆಸಲಾಗಿದೆ ಎನ್ನುತ್ತಾರೆ ಸ್ಥಳೀಯ ಅಧಿಕಾರಿಗಳು.

‘ಸುಮಾರು 1,300 ಚದರ ಕಿ.ಮೀ ಸಂರಕ್ಷಿತ ಅರಣ್ಯ ಪ್ರದೇಶವನ್ನು ಹೊಂದಿರುವ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ 2020ರಲ್ಲಿ ಸುಮಾರು 25 ವಯಸ್ಕ ಹುಲಿಗಳನ್ನು ಕ್ಯಾಮೆರಾ ಬಲೆಗಳಲ್ಲಿ ದಾಖಲಿಸಲಾಗಿದೆ. ಹಲವು ವರ್ಷಗಳಿಂದ ಇಲ್ಲಿನ ಅಧಿಕಾರಿಗಳು ನಡೆಸಿದ ಪ್ರಯತ್ನಗಳು ಈಗ ಫಲಿತಾಂಶ ನೀಡುತ್ತಿವೆ. ಹುಲಿಗಳು ತಮ್ಮ ಆವಾಸವನ್ನು ಬದಲಾಯಿಸುವುದು ಸ್ವಾಭಾವಿಕ’ ಎಂದು ಕಾಳಿ ಹುಲಿ ಸಂರಕ್ಷಣಾ ಅರಣ್ಯ ವಿಭಾಗದ ನಿರ್ದೇಶಕ ಮರಿಯಾ ಕ್ರಿಸ್ತುರಾಜು ಹೇಳಿದರು.

ಕಾಳಿ ಹುಲಿ ಸಂರಕ್ಷಿತ ಪ್ರದೇಶವು ಗೋವಾ ಮತ್ತು ಮಹಾರಾಷ್ಟ್ರದ ಗಡಿಯಲ್ಲಿರುವ ಆರು ಬೇರೆ ಬೇರೆ ಅರಣ್ಯ ಪ್ರದೇಶಗಳನ್ನು ಹೊಂದಿಕೊಂಡಿದೆ. ಕಪ್ಪು ಚಿರತೆ, ಆನೆ ಮತ್ತು ಹುಲಿ ಇಲ್ಲಿರುವ ಪ್ರಮುಖ ಪ್ರಾಣಿಗಳಾಗಿವೆ. 2008– 09ರಲ್ಲಿ ಕೂಡಾ ಚಿಕ್ಕಮಗಳೂರಿನ ಭದ್ರಾ ಹುಲಿ ಸಂರಕ್ಷಿತ ಪ್ರದೇಶದಿಂದ ಗಂಡು ಹುಲಿಯೊಂದು ನೇರ ಅಳತೆಯ ಪ್ರಕಾರ 200 ಕಿ.ಮೀ ದೂರ ಚಲಿಸಿ, ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಅಣಶಿ ವಲಯಕ್ಕೆ ಬಂದಿತ್ತು. ಇದೂ ಕ್ಯಾಮೆರಾ ಬಲೆಗಳ ಫೋಟೊ ದಾಖಲೆಗಳಿಂದ ತಿಳಿದು ಬಂದಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT