ಮಂಗಳವಾರ, ಜನವರಿ 21, 2020
27 °C

ಶಿರಸಿ: ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಮಿಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಸಮಾನ ಕನಿಷ್ಠ ವೇತನ ಜಾರಿ, ಬೆಲೆ ಏರಿಕೆ ನಿಯಂತ್ರಣ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜೆಸಿಟಿಯು ಕರೆ ನೀಡಿದ್ದ ಸಾರ್ವತ್ರಿಕ ಮುಷ್ಕರದ ಭಾಗವಾಗಿ ವಿವಿಧ ಕಾರ್ಮಿಕ ಸಂಘಟನೆಗಳ ಸದಸ್ಯರು ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಬೆಂಬಲಿಸಿದ ವಿವಿಧ ಸಂಘಟನೆಗಳು ಹಳೇ ಬಸ್ ನಿಲ್ದಾಣ ವೃತ್ತ ಬಳಿ ಪ್ರತಿಭಟನೆ ನಡೆಸಿದರು. ಬಸ್ ನಿಲ್ದಾಣದಿಂದ ನಗರದ ಪ್ರಮುಖ ಬೀದಿಗಳಲ್ಲಿ 300ಕ್ಕೂ ಅಧಿಕ ಕಾರ್ಯಕರ್ತರು ಮೆರವಣಿಗೆ ನಡೆಸಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು. ಪ್ರಮುಖರಾದ ಸಿ.ಆರ್. ಶಾನಭಾಗ, ನಾಗಪ್ಪ ನಾಯ್ಕ, ಗಂಗಾ ಹೆಗಡೆ, ಲಕ್ಷ್ಮೀ ನಾಯ್ಕ, ಗೀತಾ ಚಕ್ರಸಾಲಿ, ಭಾರತಿ ಮರಾಠೆ ಇದ್ದರು.

ತಾಲ್ಲೂಕಿನಲ್ಲಿ ಜನಜೀವನ ಎಂದಿನಂತೆ ಇತ್ತು. ಶಾಲೆ–ಕಾಲೇಜು, ಕಚೇರಿಗಳು ತೆರೆದಿದ್ದವು. ಬಸ್ ಸಂಚಾರ, ವ್ಯಾಪಾರ–ವಹಿವಾಟು ಯಾವುದರ ಮೇಲೂ ಬಂದ್ ಪರಿಣಾಮ ಬೀರಿಲ್ಲ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು