ಶಿವಧನುಸ್ಸು ಮುರಿದು ಮದುವೆಯಾದ ವರ!

ಮಂಗಳವಾರ, ಜೂನ್ 18, 2019
29 °C

ಶಿವಧನುಸ್ಸು ಮುರಿದು ಮದುವೆಯಾದ ವರ!

Published:
Updated:
Prajavani

ಕಾರವಾರ: ಅಲ್ಲಿ ಸ್ವಯಂವರ ಏರ್ಪಡಿಸಲಾಗಿತ್ತು. ಶಿವಧನುಸ್ಸನ್ನು ಎತ್ತಿ ಮುರಿದವನ ಜೊತೆ ಮದುವೆಯಾಗುವುದಾಗಿ ವಧು ಹೇಳಿದ್ದಳು. ಕೆಲವು ಯುವಕರು ಧನುಸ್ಸನ್ನು ಎತ್ತಲು ಪ್ರಯತ್ನಿಸಿ ಸೋತರು. ಕೊನೆಗೆ ಬಂದ ಗಟ್ಟಿಮುಟ್ಟಾದ ಯುವಕ, ಸ್ಪರ್ಧೆಯನ್ನು ಗೆದ್ದ. ಜೊತೆಗೆ ವಧುವಿನ ಹೃದಯವನ್ನೂ ಕದ್ದ. ಅವನ ಕೊರಳಿಗೆ ಆಕೆ ಹೂಮಾಲೆ ಹಾಕಿದಳು!

ಇದು ಕುಮಟಾ ತಾಲ್ಲೂಕಿನ ಗೋಕರ್ಣದಲ್ಲಿ ಮೇ 19ರಂದು ನಡೆದ ವಿವಾಹ ಸಮಾರಂಭವೊಂದರಲ್ಲಿ ಕಂಡುಬಂದ ಸನ್ನಿವೇಶಗಳು. ಗೋಕರ್ಣದ ಭದ್ರಕಾಳಿ ದೇವಸ್ಥಾನದ ಅರ್ಚಕ ಶ್ರೀಧರ್ ಗೋವಿಂದ ಭಟ್ ಹಾಗೂ ಮಮತಾ ದಂಪತಿಯ ಪುತ್ರಿ ನಿಶಾ ಅವರ ಮದುವೆಯನ್ನು ಅದೇ ಗ್ರಾಮದ ಆಶಾ ಹಾಗೂ ರಾಮದಾಸ್ ಕಾಶಿನಾಥ್ ಕಾಮತ್ ಪುತ್ರ ಗಿರೀಶ್ ಜೊತೆ ನಿಶ್ಚಯಿಸಲಾಗಿತ್ತು.

ಸ್ವಯಂವರದಲ್ಲಿ ಬಿಲ್ಲನ್ನು ಎತ್ತಿದ ರಾಮನನ್ನು ಸೀತೆ ಮದುವೆಯಾಗುವ ರೀತಿಯ ಪರಿಕಲ್ಪನೆಯಲ್ಲಿ ತಮ್ಮ ಮಗಳ ವಿವಾಹವಾಗಬೇಕು ಎಂದು ವಧುವಿನ ಕುಟುಂಬದವರು ಇಚ್ಛಿಸಿದ್ದರು. ಅದರಂತೆ ಮದುವೆ ಮಂಟಪದ ಒಳಗೆ ಧನುಸ್ಸಿನ ಮಾದರಿಯನ್ನು ಇಡಲಾಗಿತ್ತು. ಸ್ವಯಂವರದ ರೀತಿಯಲ್ಲೇ ಅವಿವಾಹಿತ ಯುವಕರನ್ನು ಸ್ಪರ್ಧೆಗೆ ಆಹ್ವಾನಿಸಲಾಯಿತು. ಎಲ್ಲರೂ ಸ್ಪರ್ಧೆಯಲ್ಲಿ ಸೋಲುವ ಪ್ರಸಂಗವನ್ನು ಪ್ರದರ್ಶಿಸಿದರು. ನಂತರ ವರ ಗಿರೀಶ್ ಬಿಲ್ಲನ್ನು ಎತ್ತಿ ಮುರಿದರು. ಬಳಿಕ ಸ್ವಯಂ ವರದಲ್ಲಿ ವಿಜೇತರಾಗಿ ವಧು ನಿಶಾ ಅವರನ್ನು ವಿವಾಹವಾದರು.

ಇದರ ವಿಡಿಯೊ ತುಣುಕನ್ನು ವರ ಗಿರೀಶ್ ಫೇಸ್‌ಬುಕ್‌ನ ತಮ್ಮ ಖಾತೆಗೆ ಅಪ್‌ಲೋಡ್ ಮಾಡಿದ್ದಾರೆ. ಅದನ್ನು ಸಾವಿರಾರು ಜನ ವೀಕ್ಷಿಸಿದ್ದು, ವಿವಾಹ ಸಂದರ್ಭದಲ್ಲಿ ಪುರಾಣ ಪ್ರಸಂಗವನ್ನು ನೆನಪಿಸಿದ್ದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 3

  Happy
 • 4

  Amused
 • 1

  Sad
 • 1

  Frustrated
 • 6

  Angry

Comments:

0 comments

Write the first review for this !