ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೈಹಿಕ ಕಸರತ್ತು ಮಾಡಿಸುವ ರಸ್ತೆಗಳು!

ಹೊನ್ನಾವರ ತಾಲ್ಲೂಕಿನಾದ್ಯಂತ ರಸ್ತೆಗಳ ದುರವಸ್ಥೆ: ಕುಗ್ರಾಮಗಳಿಗೆ ಬಸ್ ಸಂಚಾರವೂ ಇಲ್ಲ
Last Updated 30 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಹೊನ್ನಾವರ: ಮೊದಲೇ ಹಾಳಾಗಿದ್ದ ರಸ್ತೆಗಳಿವು. ಮಳೆಗಾಲದ ನಂತರವಂತೂ ಪ್ರಯಾಣಿಕರಿಗೆ ಪ್ರತಿ ಕ್ಷಣ ನರಕದ ದರ್ಶನ ಮಾಡಿಸುವಂತಿವೆ. ರಸ್ತೆಗಳ ದುರವಸ್ಥೆಯನ್ನು ನೋಡಿದರೆ ಹಳ್ಳಿ ಹಾಗೂ ಪಟ್ಟಣಗಳ ನಡುವೆ ಅಂಥದ್ದೇನೂ ವ್ಯತ್ಯಾಸ ಕಾಣುತ್ತಿಲ್ಲ!

ತಾಲ್ಲೂಕಿನ ಬಹುತೇಕ ಎಲ್ಲ ರಸ್ತೆಗಳು ಹೊಂಡಮಯವಾಗಿವೆ. ಹೊಂಡಗಳ ಸಂಖ್ಯೆಯಲ್ಲಿ ಪಟ್ಟಣ ಹಾಗೂ ಗ್ರಾಮೀಣ ಭಾಗಗಳ ನಡುವೆ ಸ್ಪರ್ಧೆಯೇಏರ್ಪಟ್ಟಿದೆ. ಹೊಂಡಗಳಲ್ಲಿ ಇಳಿದು ಮೇಲೇರುವ ವಾಹನಗಳು ಪ್ರಯಾಣಿಕರಿಗೆ ದೈಹಿಕ ಕಸರತ್ತು ಮಾಡಿಸುತ್ತಿವೆ.

ಮಳೆ ಕಡಿಮೆಯಾದರೂ ಗ್ರಾಮೀಣ ಭಾಗಗಳ ರಸ್ತೆಗಳಲ್ಲಿ ಅನೇಕ ಕಡೆ ಈಜುಕೊಳದಷ್ಟು ವಿಸ್ತಾರವಾದ ಹೊಂಡ ಉಳಿದುಕೊಂಡಿದೆ. ಹೊಂಡಗಳಲ್ಲಿ ರಾಡಿ ನೀರು ಇನ್ನೂ ನಿಂತಿದೆ. ಮಳೆಗಾಲದಲ್ಲಿ ರಸ್ತೆಗಳಿಗೆ ಮೆತ್ತಿದ್ದ ಕೆಸರು ನಿಧಾನವಾಗಿ ಒಣಗುತ್ತಿದ್ದು ಪ್ರಯಾಣಿಕರಿಗೆ ದೂಳಿನ ಸ್ನಾನ ಮಾಡಿಸುವ ಲಕ್ಷಣಗಳು ಕಾಣಿಸುತ್ತಿವೆ.

ತೀರಾ ದುಃಸ್ಥಿತಿಗೆ ತಲುಪಿರುವ ಇಂಥ ರಸ್ತೆಗಳಲ್ಲಿ ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದು ಓಡಾಡಬೇಕಾದ ಪರಿಸ್ಥಿತಿಯಿದೆ. ವಾಹನ ಚಾಲಕರು ಗ್ಯಾರೇಜ್‌ಗಳಮುಂದೆಸರದಿಯಲ್ಲಿನಿಲ್ಲುವಂತಾಗಿದೆ. ವಾಹನಗಳಲ್ಲಿ ಓಡಾಡುವ ಅನಿವಾರ್ಯತೆ ಇರುವ ರೋಗಿಗಳು, ಗರ್ಭಿಣಿಯರ ಪಾಡಂತೂ ಹೇಳತೀರದು. ಕೆಲವು ಕುಗ್ರಾಮಗಳಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ತನ್ನ ಬಸ್ ಸೇವೆಯನ್ನು ಸ್ಥಗಿತಗೊಳಿಸಿದೆ. ಆಟೊ, ಟ್ಯಾಕ್ಸಿ ಚಾಲಕರಂತೂ ಆ ರಸ್ತೆಗಳ ಹೆಸರು ಎತ್ತಿದರೇ ಮೂಗು ಮುರಿಯುತ್ತಾರೆ!

ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿ ಮುಂದುವರಿದು ವರ್ಷಗಳೇ ಕಳೆದಿದ್ದು ರಸ್ತೆಗಳ ಸ್ಥಿತಿ ಅಯೋಮಯವಾಗಿದೆ. ಅಗೆದ ರಸ್ತೆಯ ಮಧ್ಯದಲ್ಲಿ ಮತ್ತೆ ಡಾಂಬರು ಬಳಿಯಲಾಗಿದೆ. ಆದರೆ,ವಾಹನಗಳು ಹೊಂಡಗಳ ಮಧ್ಯೆ ರಸ್ತೆಯನ್ನು ಹುಡುಕುತ್ತ ಸಾಗಬೇಕಾಗಿದೆ. ಬಸ್ ನಿಲ್ದಾಣದಿಂದ ಬಾಂದೇಹಳ್ಳ, ರಾಯಲ್ಕೇರಿ, ಲಕ್ಷ್ಮೀನಾರಾಯಣ ನಗರ ಮೊದಲಾದೆಡೆ ಡಾಂಬರು ರಸ್ತೆಯ ಗುರುತು ಸಿಕ್ಕದಷ್ಟು ರಸ್ತೆ ಹಾಳಾಗಿದೆ.

‘ಸಾಲ ಮಾಡಿ ತಂದ ನಮ್ಮ ಆಟೊ ರಿಕ್ಷಾಗಳೆಲ್ಲ ಹೊಂಡ ಬಿದ್ದ ರಸ್ತೆಗಳಿಂದ ಗುಜರಿಗೆ ನೀಡುವಂತಾಗುತ್ತಿವೆ. ವಾಹನ ತೆರಿಗೆ ವಸೂಲಿ ಮಾಡುವ ಸರ್ಕಾರಕ್ಕೆ ಉತ್ತಮ ರಸ್ತೆ ಒದಗಿಸುವ ಜವಾಬ್ದಾರಿ ಮಾತ್ರ ಇಲ್ಲವಾಗಿದೆ’ ಎನ್ನುವುದು ಆಟೊ ಚಾಲಕ ರಾಜು ನಾಯ್ಕ ಅವರ ಪ್ರಶ್ನೆಯಾಗಿದೆ.

ಸಿಗುವುದು ಕೇವಲ ₹ 16 ಲಕ್ಷ?:‌ಎರಡುವರ್ಷಗಳಿಂದ ಈ ರಸ್ತೆಗಳ ನಿರ್ವಹಣೆಗಾಗಿ ಶಾಸಕರಿಗೆ ಬರಬೇಕಿದ್ದ ₹ 59 ಲಕ್ಷ ಅನುದಾನ ಬಂದಿಲ್ಲ. ಈ ರಸ್ತೆಗಳ ಅಭಿವೃದ್ಧಿ ಅತಿವೃಷ್ಟಿಹಾನಿ ಸರಿಪಡಿಸಲು ಪ್ರತಿ ತಾಲ್ಲೂಕಿಗೆ ನೀಡುವ ₹ 1 ಕೋಟಿಯನ್ನು ನೆಚ್ಚಿಕೊಂಡಿದೆ. ಆದರೆ, ಈ ಅನುದಾನದಲ್ಲಿ ನಿಯಮಾವಳಿಯಂತೆ ಕೇವಲಶೇ20ರಷ್ಟು ಹಣವನ್ನು ಮಾತ್ರ ರಸ್ತೆಗೆ ಬಳಸಿಕೊಳ್ಳಲು ಸಾಧ್ಯವಿದೆ.ಇದರಂತೆ ಲೆಕ್ಕ ಹಾಕಿದರೆ ತಾಲ್ಲೂಕಿನ ಗ್ರಾಮೀಣ ಭಾಗದ ರಸ್ತೆ ಕಾಮಗಾರಿಗೆ ಇದರಲ್ಲಿ ಕೇವಲ ₹ 16 ಲಕ್ಷ ಸಿಗಲಿದೆ.

ಹೊನ್ನಾವರದಲ್ಲಿ ರಸ್ತೆಯ ಅಂಕಿ ಅಂಶ

1,265 ಕಿ.ಮೀ‌:ತಾಲ್ಲೂಕಿನಲ್ಲಿರುವ ಗ್ರಾಮೀಣ ರಸ್ತೆ

33 ಕಿ.ಮೀ:ರಾಜ್ಯ ಹೆದ್ದಾರಿ

153 ಕಿ.ಮೀ:ಜಿಲ್ಲಾ ಮುಖ್ಯ ರಸ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT