ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಬಾಗಿಲಿಗೆ ಹಣಕಾಸು ನೆರವು

Last Updated 31 ಮಾರ್ಚ್ 2020, 12:00 IST
ಅಕ್ಷರ ಗಾತ್ರ

ಶಿರಸಿ: ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ತುರ್ತು ಹಣಕಾಸಿನ ಅಗತ್ಯವಿರುವ ಸಂಘದ ಸದಸ್ಯರಿಗೆ ಮನೆಬಾಗಿಲಿಗೆ ಹಣ ಒದಗಿಸಲು ಇಲ್ಲಿನ ತೋಟಗಾರ್ಸ್ ಕೋ ಆಪರೇಟಿವ್ ಸೇಲ್ ಸೊಸೈಟಿ (ಟಿಎಸ್‌ಎಸ್) ಮುಂದಾಗಿದೆ.

ಶಿರಸಿಯಲ್ಲಿರುವ ಕೇಂದ್ರ ಕಚೇರಿ ವ್ಯಾಪ್ತಿಯಲ್ಲಿ ಈ ವ್ಯವಸ್ಥೆ ಜಾರಿಗೊಳಿಸಿರುವ ಟಿಎಸ್‌ಎಸ್, ಒಂದು ಊರು ಅಥವಾ ಗ್ರಾಮ ಮಟ್ಟದಲ್ಲಿ ಕನಿಷ್ಠ ಹತ್ತು ಜನರಿಗೆ ಹಣದ ಅವಶ್ಯಕತೆ ಇದ್ದಲ್ಲಿ ಹಣವನ್ನು ತಲುಪಿಸುತ್ತದೆ.

ಹಣದ ಅವಶ್ಯಕತೆಯ ಬಗ್ಗೆ ಆ ಭಾಗದ ಒಬ್ಬ ಸ್ವಯಂ ಸೇವಕ ಸದಸ್ಯ ಜವಾಬ್ದಾರಿ ವಹಿಸಿಕೊಂಡು, ಆ ಭಾಗದ ಹಣದ ಅವಶ್ಯಕತೆ ಇರುವವರ ಸದಸ್ಯರ ಹೆಸರು, ಖಾತೆ ಸಂಖ್ಯೆಯ ವಿವರಗಳನ್ನು ವಾಟ್ಸಪ್ ಮೂಲಕ ಸಂಘಕ್ಕೆ ಕಳುಹಿಸಬೇಕು. ಸಂಘ ಅದನ್ನು ಪರಿಶೀಲಿಸಿ, ಸ್ವಯಂ ಸೇವಕರಿಗೆ ನಿರ್ದಿಷ್ಟ ಸಮಯದಲ್ಲಿ ಹಣ ಮತ್ತು ಅಗತ್ಯ ವಸ್ತುಗಳನ್ನು ತಲುಪಿಸಲು ಕ್ರಮಕೈಗೊಳ್ಳುತ್ತದೆ. ಸ್ವಯಂ ಸೇವಕರು ವಿತರಣೆಯ ಹೊಣೆ ನಿರ್ವಹಿಸಬೇಕು. ಒಬ್ಬ ಖಾತೆದಾರರಿಗೆ ಗರಿಷ್ಠ ₹ 5,000 ನೀಡಲಾಗುತ್ತದೆ. ಖಾತೆದಾರರು ತಮ್ಮ ಖಾತೆಗೆ ಖರ್ಚು ಹಾಕಿ ಹಣ ನೀಡುವ ಕುರಿತು ಪತ್ರವನ್ನು ಮುಂಚಿತವಾಗಿ ಸ್ವಯಂ ಸೇವಕರಿಗೆ ತಲುಪಿಸಬೇಕು. ಹಣ ತಲುಪಿದ ನಂತರ ಸಂಘದ ವೋಚರ್‌ಗೆ ಸಹಿ ಹಾಕಿ ಪುನಃ ಸ್ವಯಂ ಸೇವಕರಿಗೆ ನೀಡಬೇಕು ಎಂದು ಟಿಎಸ್‌ಎಸ್‌ ತಿಳಿಸಿದೆ.

ವಾಟ್ಸ್‌ಆ್ಯಪ್‌ಗೆ ಮಾಹಿತಿ ಕಳುಹಿಸಿದ ಎರಡು ದಿನಗಳಲ್ಲಿ ಹಣ ಬಟವಡೆ ವ್ಯವಸ್ಥೆ ಮಾಡಲಾಗುವುದು. ಅವಶ್ಯ ಔಷಧ ಬೇಕಿದ್ದಲ್ಲಿ ಅದರ ಚೀಟಿ ಅಥವಾ ಅದರ ಚಿತ್ರವನ್ನು ವಾಟ್ಸ್‌ಆ್ಯಪ್‌ಗೆ ಕಳುಹಿಸಬಹುದು. ಅವಶ್ಯಕ ವಸ್ತುಗಳಾದ ಪಶು ಆಹಾರ, ಅಕ್ಕಿ, ಹೆಸರುಬೇಳೆ, ತೊಗರಿಬೇಳೆ, ಎಣ್ಣೆ, ಉಪ್ಪು ಇವುಗಳನ್ನು ಸಹ ಅತಿ ಅವಶ್ಯವುಳ್ಳವರಿಗೆ ಪೂರೈಕೆ ಮಾಡಲಾಗುತ್ತಿದೆ. ಸ್ವಯಂ ಸೇವಕರಾಗಲು ಇಚ್ಚಿಸುವವರು 8861478675 ಈ ಸಂಖ್ಯೆ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT